ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಾಗಿ ಗುರುತಿಸಿಕೊಂಡಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರ ಆಪ್ತರು ಹಾಗೂ ಕಚೇರಿ ಮನೆ ಸೇರಿದಂತೆ ವಿವಿಧೆಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಸತತ ಮೂರು ಗಂಟೆಯಿಂದ ಬೆಂಗಳೂರಿನಲ್ಲಿರುವ ನ್ಯಾಷನಲ್ ಟ್ರಾವೆಲ್ ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.
6 ಅಧಿಕಾರಿಗಳ ತಲಾ ಇಬ್ಬರ ಮೂರು ತಂಡಗಳು ಎಲ್ಲಾ ಅಯಮಾದಲ್ಲೂ ತನಿಖೆ ನಡೆದಿದ್ದು, ನ್ಯಾಷನಲ್ ಟ್ರಾವೆಲ್ ನಲ್ಲಿ ನಡೆದಿರುವ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲನೆ ಸಿಬ್ಬಂದಿ ಸಮ್ಮುಖದಲ್ಲೇ ನಡೆಸಲಾಗಿದೆ.