ಗಣಿ ನಾಡು ಬಳ್ಳಾರಿಯ ಮಹಾನಗರ ಪಾಲಿಕೆ ಚುನಾವಣೆ ಇಂದು ನಡೆಯಲಿದೆ. ಇಂದು ಪಾಲಿಕೆ ಗದ್ದುಗೆ ಏರುವವರು ಯಾರು ಎನ್ನುವ ಪ್ರಶ್ನೆ ಬಳ್ಳಾರಿ ಜನತೆಯನ್ನು ಕಾಡುತ್ತಿದೆ. ಈಗಾಗಲೇ ಸ್ಪಷ್ಟವಾದ ಬಹುಮತ ಪಡೆದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿ ಇದೆ. ಆದರೆ ಬಿಜೆಪಿ ಪಕ್ಷದಲ್ಲಿ ಸಹ ಕೊನೆಯ ಪ್ರಯತ್ನ ನಡೆದಿದೆ ಎನ್ನುಲಾಗುತ್ತಿದೆ.
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ .ಗ್ರಾಮೀಣ ಶಾಸಕ ಬಿ.ನಾಗೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಗಿದ್ದು, ಮೇಯರ್ ಅಭ್ಯರ್ಥಿಯಾಗಿ ರಾಜೇಶ್ವರಿ ಸುಬ್ಬರಾಯುಡು ಹಾಗೂ ಉಪ ಮೇಯರ್ ಅಭ್ಯರ್ಥಿಯಾಗಿ ಮಾಲನ್. ಬಿ ನಾಮಪತ್ರ ಸಲ್ಲಿಸಿದ್ದಾರೆ.