ಆಸ್ಟ್ರೇಲಿಯಾದ ಎಮ್ಮಾ ಮೆಕ್ಕೊಯಿನ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ 7 ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ ಅತೀ ಹೆಚ್ಚು ಪದಕ ಗೆದ್ದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಹಾಲಿ ಚಾಂಪಿಯನ್ ಅಮೆರಿಕ ತಂಡವನ್ನು 4×100 ಮೀ. ರಿಲೆಯಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ಮಣಿಸಿ ಚಿನ್ನದ ಪದಕ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ 7 ಪದಕ ಗೆದ್ದ ದಾಖಲೆ ಬರೆದರು.
ಕೇಲಿ ಮೆಕ್ ಕೋಯಿನ್, ಚೆಲ್ಸಿಯಾ ಹೋಡ್ಜಸ್, ಮೆಕ್ ಕೊಯಿನ್ ಮತ್ತು ಕೇಟ್ ಕ್ಯಾಂಪೆಲ್ ಅವರನ್ನೊಳಗೊಂಡ ತಂಡ 3 ನಿಮಿಷ, 51.60 ಸೆಕೆಂಡ್ ಗಳಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಗುರಿ ಮುಟ್ಟುವ ಮೂಲಕ ಸ್ವರ್ಣ ಪದಕ ಗೆದ್ದುಕೊಂಡಿತು. ಅಮೆರಿಕ ತಂಡ 3.51.73 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆಯಿತು. ಕೆನಡಾ ತಂಡ 3.52.60 ಸೆಕೆಂಡ್ ಗಳಲ್ಲಿ ತಲುಪಿ ಕಂಚಿನ ಪದಕ ಗಳಿಸಿತು.
27 ವರ್ಷದ ಎಮ್ಮಾ ಮೆಕ್ಕೊಯಿನ್ ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ 4ನೇ ಚಿನ್ನದ ಪದಕ ಗೆದ್ದುಕೊಂಡಿದ್ದು, 3 ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ 1952ರಲ್ಲಿ ಪೂರ್ವ ಜರ್ಮನಿಯ ಕ್ರಿಸ್ಟಿನ್ ಒಟ್ಟೊ ಮತ್ತು 2008ರಲ್ಲಿ ಅಮೆರಿಕದ ನಥಾಲಿ ಕೌಫ್ಲಿನ್ ತಲಾ 6 ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದರು.