ಭಾರತ ವನಿತೆಯರ ತಂಡ ಬುಧವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುವ ಮೂಲಕ 7 ವರ್ಷದ ನಂತರ ಮೊದಲ ಬಾರಿ ಟೆಸ್ಟ್ ಆಡಿತು. ಈ ಪಂದ್ಯದ ಮೂಲಕ ಐವರು ವನಿತೆಯರು ಭಾರತದ ಪರ ಚೊಚ್ಚಲ ಪಂದ್ಯವಾಡಿದ ದಾಖಲೆ ಬರೆದರು.
ಬ್ರಿಸ್ಟೋಲ್ ನಲ್ಲಿ ಮಂಗಳವಾರದಿಂದ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಇಂಗ್ಲೆಂಡ್ ನಿರ್ಧರಿಸಿದೆ.
ಭಾರತದ ಪರ ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್, ತಾನ್ಯಾ ಭಾಟಿಯಾ, ಸ್ನೇಹ ರಾಣಾ ಮತ್ತು ಶೆಫಾಲಿ ವರ್ಮಾ ಇದೇ ಮೊದಲ ಬಾರಿ ಟೆಸ್ಟ್ ಆಡುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸ್ಪಿನ್ ಆಲ್ ರೌಂಡರ್ ಸ್ನೇಹ ರಾಣಾ 5 ವರ್ಷಗಳ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.