ಪ್ರಿಯಕರನಿಗಾಗಿ ಗಾಂಜಾ ತಲುಪಿಸುತ್ತಿದ್ದ ಇಂಜಿನಿಯರಿಂಗ್ ಪದವೀಧರೆಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿ ಎರಡೂವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಂಧ್ರಪ್ರದೇಶದಿಂದ ಬಂದು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರೇಣುಕಾ ಬಂಧಿತ ಆರೋಪಿ.
ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಸಿದ್ದಾರ್ಥ್ ಎಂಬಾತನನ್ನು ಪ್ರೇಮಿಸಿದ್ದ ರೇಣುಕಾ, ಸಿದ್ದಾರ್ಥ್ ಕೊಡುತ್ತಿದ್ದ ಗಾಂಜಾವನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಳು.
ಬೆಂಗಳೂರಿನ ಮುಖ್ಯರಸ್ತೆಗಳಲ್ಲಿರುವ ಓಯೋ ರೂಮ್ ಮಾಡುತ್ತಿದ್ದ ರೇಣುಕಾ, ಸಿದ್ದಾರ್ಥ್ ಜೊತೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿ ಗ್ರಾಹಕರನ್ನು ರೂಮ್ ಬಳಿ ಕರೆಸಿಕೊಂಡು ಗಾಂಜಾ ಪೂರೈಸಲಾಗುತಿತ್ತು. ತಾನು ಸಿಕ್ಕಿ ಬೀಳಬಾರದು ಎಂದು ಗೆಳತಿ ಕೈಯಲ್ಲಿ ಸಿದ್ದಾರ್ಥ್ ಗಾಂಜಾ ತಲುಪಿಸುತ್ತಿದ್ದ.
ಸದಾಶಿವನಗರ ಪಿಎಸ್ಐ ಶೋಭಾ ನೇತೃತ್ವದ ತಂಡ ರೇಣುಕಾಳನ್ನು ಬಂಧಿಸುವಲ್ಲಿ ಯಶ್ವಿಯಾಗಿದ್ದು, ಪ್ರೇಮಿ ಸಿದ್ಧಾರ್ಥ್ ತಲೆಮರೆಸಿಕೊಂಡಿದ್ದಾನೆ.