ಭಾರತದ ಆರಂಭಿಕ ಕೆಎಲ್ ರಾಹುಲ್ ಅಂಪೈರ್ ತೀರ್ಪಿನ ವಿರುದ್ಧ ಮೈದಾನದಲ್ಲೇ ಅಸಮಾಧಾನ ತೋರಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದೆ.
ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ ಎರಡನೇ ಇನಿಂಗ್ಸ್ ಆಡಲಿಳಿದ ಭಾರತದ ಪರ ಕೆಎಲ್ ರಾಹುಲ್ ತಾಳ್ಮೆಯ 46 ರನ್ ಗಳಿಸಿದ್ದರು. ಆದರೆ ಜಿಮ್ಮಿ ಆ್ಯಂಡರ್ಸನ್ ಎಸೆತದಲ್ಲಿ ಕ್ಯಾಚ್ ನೀಡಿದ್ದರು.
ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರೆ, ಇಂಗ್ಲೆಂಡ್ ಆಟಗಾರರು ಮೇಲ್ಮನವಿ ಸಲ್ಲಿಸಿದ್ದು, ಮೂರನೇ ಅಂಪೈರ್ ಚೆಂಡು ಬ್ಯಾಟಿಗೆ ಬಡಿದಿದ್ದನ್ನು ದೃಢಪಡಿಸಿ ಔಟ್ ಎಂದು ತೀರ್ಪು ನೀಡಿದ್ದಕ್ಕೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ಹಾಗೂ ರ್ಯಾಂಕಿಂಗ್ ನಲ್ಲಿ ಒಂದು ಅಂಕ ಕಡಿತಗೊಳಿಸಿ ತೀರ್ಪು ನೀಡಿದೆ.
ಸಮಸ್ಯೆ ಒಬ್ಬರೇ ಇಟ್ಟುಕೊಂಡಿದ್ದರೆ ಪರಿಹಾರ ಆಗೋದು ಹೇಗೆ? ನಂಗೆ ಗೊತ್ತು ನೀವು ಜಾಸ್ತಿ ಸ್ವಾಭಿಮಾನಿ ಅಂತ. ಆದರೂ ಕೇಳ್ತಿದ್ದೀನಿ.