ನಕಲಿ ಚಿನ್ನದ ನಾಣ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮರಿಯಮ್ಮನ ಹಳ್ಳಿ ಪಟ್ಟಣದ ವೃತ್ತದಲ್ಲಿ ನಕಲಿ ಚಿನ್ನ ಮಾರಾಟಕ್ಕೆ ಮುಂದಾಗಿದ್ದ ದಾವಣಗೆರೆಯ ಚನ್ನಗಿರಿಯ ಚಿಕ್ಕ ಕುರುಬರಹಳ್ಳಿ ಗ್ರಾಮದ ಎಂ.ವಿ.ಸುದೀಪ್ (20), ಹೊಸಪೇಟೆ ತಾಲೂಕಿನ ಗರಗ ಗ್ರಾಮದ ಕೆ.ಸುದೀಪ್ (19) ಬಂಧಿತ ಆರೋಪಿಗಳು.
ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ೩೦೦ ನಕಲಿ ಚಿನ್ನದ ನಾಣ್ಯ, ಎರಡು ಮೋಟರ್ ಸೈಕಲ್, ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಲ್ಲಿ ಒಬ್ಬ ಯುವಕ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದಾನೆ.