ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿರೋ ನಾಗೇಶನ ಮೇಲೆ ಅವರ ಕುಟುಂಬದವರೇ ಹಿಡಿಶಾಪ ಹಾಕುತ್ತಿದ್ದಾರೆ. ನಮಗೂ ಅವನಿಗೂ ಸಂಬಂಧ ಇಲ್ಲ ಎಂದು ನಾಗೇಶ್ ಮಾವ ಕೃಷ್ಣಪ್ಪ ಕಣ್ಣೀರು ಹಾಕಿದ್ದಾರೆ.
ಅವನಿಂದ ನಮಗೆಲ್ಲಾ ತೊಂದರೆ ಆಗಿದೆ. ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ. ಈಗ ನಾವು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ
ಅವನು ಅಪ್ಪ ಅಮ್ಮನ ಜೊತೆ ಒಬ್ಬನೆ ವಾಸವಿದ್ದ. ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ. ಇದನ್ನು ಓದಿ : – ಕಾಂಗ್ರೆಸ್ ನಾಯಕರು ಅಶ್ವಥ್ ನಾರಾಯಣ್ ವಿರುದ್ಧ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ – ಸಿಎಂ ಬೊಮ್ಮಾಯಿ
ಅವರ ಮನೆಯಿಂದ ಮದುವೆಯಾಗಿದ್ದೆ ತಪ್ಪಾಗಿ ಹೋಗಿದೆ. ಇತ್ತೀಚಿಗೆ ಅವನೇ ಗಾರ್ಮೆಂಟ್ಸ್ ಓಪನ್ ಮಾಡಿದ್ದ. ಇಂಥ ನೀಚ ಕೆಲಸಕ್ಕಾಗಿ ಅದನ್ನು ಮಾರಿಬಿಟ್ಟ ಎಂದು ಕಿಡಿಕಾರಿದ್ದಾರೆ. ಊರಲ್ಲಿರೋ ಜಮೀನು ಕೂಡ ಮಾರಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ