ಉಗ್ರ ಸ್ವರೂಪ ಪಡೆದುಕೊಂಡ ಪಂಚಲಕ್ಷ ಪಂಚಮಸಾಲಿ ಪಾದಯಾತ್ರೆ!
ದಾವಣಗೆರೆ : ಪಂಚಮಸಾಲಿ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಇಂದು ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದೆ. ಪಂಚಲಕ್ಷ ಪಂಚಮಸಾಲಿ ಸಮಾಜದ ಪಾದಯಾತ್ರೆಯು ದಾವಣಗೆರೆ ತಲುಪಿದ ಮೇಲೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಕೂಡಲಸಂಗಮದಿಂದ ಪ್ರಾರಂಭವಾದ ಪಾದಯಾತ್ರೆ ಮಧ್ಯಕರ್ನಾಟಕ ದಾವಣಗೆರೆಗೆ ಬಂದಿದೆ, ಯಾತ್ರೆ ಮೊದಲ ಭಾರಿಗೆ ಪ್ರತಿಭಟನೆ ಹಂತ ಪಡೆದಿದೆ. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಘಟಿಕರು ದಾವಣಗೆರೆ ಗಾಂಧಿ ಸರ್ಕಲ್ ನಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹಿಸಿ ಮೀಸಲಾತಿಗಾಗಿ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ ನ ಪ್ರತಿಕೃತಿ ಗೆ ಚಪ್ಪಲಿ, ಬಾರಿಕೋಲಿನಿಂದ ಹೊಡೆದು ಅಸಮದಾನ ಹೊರ ಹಾಕಿದ್ರು. ಇನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ರಿಂದ ಯಡಿಯೂರಪ್ಪ ಪ್ರತಿಕೃತಿ ದಹನವಾಗಿದ್ದು ಕಳೆದ ಹಲವಾರು ದಿಗಳಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಸರ್ಕಾರ ಮೀಸಲಾತಿ ನೀಡದೆ ಸತಾಯಿಸುತ್ತಿದೆ. ಇಂದಿನಿಂದ ಪಾದಯಾತ್ರೆಯು ಉಗ್ರ ಸ್ವರೂಪ ತಾಳುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
