ಉಕ್ರೇನ್ ಮೇಲೆ ದಾಳಿ ನಡೆಸಿದ್ದಕ್ಕಾಗಿ ರಷ್ಯಾದ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಮುಂಬರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಪಂದ್ಯಗಳಿಂದ ನಿರ್ಬಂಧಿಸಿ ಫೀಫಾ ಆದೇಶ ಹೊರಡಿಸಿದೆ.
ಸೋಮವಾರ ಈ ಆದೇಶ ಹೊರಡಿಸಿದ ಫೀಫಾ, ವಿಶ್ವಕಪ್ ಲೀಗ್ ಪಂದ್ಯಗಳಲ್ಲಿ ರಷ್ಯಾ ತಂಡ ರಾಷ್ಟ್ರದ ಧ್ವಜ ಹಾಗೂ ರಾಷ್ಟ್ರಗೀತೆ ಇಲ್ಲದೇ ಆಡಬೇಕು ಎಂದು ಸೂಚಿಸಿದೆ.
ಫೀಫಾ ನಿರ್ಧಾರಕ್ಕೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಈ ರೀತಿಯ ಷರತ್ತುಗಳಿಗೆ ಒಳಪಟ್ಟು ಆಡಲು ಬಯಸುವುದಿಲ್ಲ ಎಂದು ಹೇಳಿದೆ. ಇದೇ ವೇಳೆ ರಷ್ಯಾ ವಿರುದ್ಧ ಆಡುವುದಿಲ್ಲ ಎಂದು ಕೆಲವು ತಂಡಗಳು ಫೀಫಾಗೆ ಹೇಳಿದೆ.