ಕೊರೊನಾ, ನಿಫಾ, ಡೆಂಗ್ಯೂ ಮುಂತಾದ ಮಾರಕ ಸೋಂಕು ಪ್ರಕರಣಗಳಿಂದ ತತ್ತರಿಸಿರುವ ಭಾರತದಲ್ಲಿ ಇದೀಗ ಮೊದಲ ಬಾರಿ ಹವಾನಾ ಸೋಂಕು ಕಾಣಿಸಿಕೊಂಡಿದೆ.
ಅಮೆರಿಕದದಿಂದ ಆಗಮಿಸಿದ್ದ ಸಿಐಎ ಅಧಿಕಾರಿಯೊಬ್ಬರಲ್ಲಿ ನಿಗೂಢ ಹವಾನಾ ಸೋಂಕು ದೃಢಪಟ್ಟಿದ್ದು, ಅಮೆರಿಕದಲ್ಲಿ ರೂಪಾಂತರಗೊಂಡಿರುವ ಈ ಸೋಂಕು ಇದೀಗ ಜಗತ್ತಿನ ಹಲವೆಡೆ ಹರಡುವ ಸಾಧ್ಯತೆ ಇದೆ.
ಸಿಐಎ ಅಧಿಕಾರಿ ವಿಲಿಯಮ್ ಬರ್ನ್ಸ್ ಅವರಲ್ಲಿ ಹವಾನಾ ಸೋಂಕು ದೃಢಪಟ್ಟಿದ್ದು, ಇವರ ಚಿಕಿತ್ಸೆಗೆ ಭಾರತ ಸರಕಾರ ಕ್ರಮ ಕೈಗೊಂಡಿದೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿಯೆಟ್ನಾಂ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇದಕ್ಕೆ ಕಾರಣ ಹವಾನಾ ಸೋಂಕು ದೊಡ್ಡ ಮಟ್ಟದಲ್ಲಿ ಹರಡುವ ಭೀತಿ ಎಂದು ಪ್ರಕಟಣೆ ತಿಳಿಸಿದೆ.