ಪುನೀತ್ ರಾಜ್ ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಚಿತ್ರ ‘ಜೇಮ್ಸ್’ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಈ ಶುಭದಿನ ಅಪ್ಪು ಕನಸಿನ ಚಿತ್ರ ‘ಗಂಧದಗುಡಿ’ಯ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಸುದ್ದಿ ತಿಳಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಡಬಲ್ ಧಮಾಕದಂತೆ ಕುಣಿದು ಕುಪ್ಪಳಿಸುತ್ತಿದ್ದಾರೆ.
‘ಗಂಧದಗುಡಿ’ ಫಸ್ಟ್ ಲುಕ್ ಅನ್ನು ಪಿ ಆರ್ ಕೆ ಪ್ರೊಡಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದು, ಈ ದಿನದಂದು ನಾವು ನಮ್ಮ ಪ್ರೀತಿಯ ಅಪ್ಪುವಿನ ಹುಟ್ಟುಹಬ್ಬವನ್ನು ಅವರು ಪ್ರೀತಿಸುವ ಭೂಮಿ, ಜೀವಿಗಳು, ಸಾಹಸ ಮತ್ತು ಅದ್ಭುತ ಪ್ರಜ್ಞೆ ಮೂಲಕ ಸ್ವಾಗತ ಮಾಡಿಕೊಳ್ಳುತ್ತಿದ್ದೇವೆ ಎಂದು ಇನ್ ಸ್ಟಾ ದಲ್ಲಿ ಬರೆದು ಅಪ್ಪು ಲುಕ್ ರಿವಿಲ್ ಮಾಡಿದ್ದಾರೆ.