ನಾರಾಯಣಪುರ ಜಲಾಶಯದಿಂದ ಮೂರುವರೆ ಲಕ್ಷ ಕ್ಯೂಸೆಕ್ಸ್ ನೀರಿದು ಬಿಟ್ಟ ಪರಿಣಾಮ ರಾಯಚೂರು ಜಿಲ್ಲೆಯ ಪುರಾತನ ದೇವಾಲಯ ಸಂಪೂರ್ಣ ಜಾಲವೃತಗೊಂಡಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಜಲಾವೃತ್ತಗೊಂಡಿದೆ. ಇದರಿಂದ ದೇವಾಲಯಕ್ಕೆ ಭಕ್ತರು ಆರ್ಚಕರು ಪೂಜೆ ಮಾಡಲು ಹೋಗಲು ಅಡಚಣೆ ಉಂಟು ಮಾಡಿದೆ.
ನೀರು ಹರಿಯುತ್ತಿದ್ದರೂ ಹಗ್ಗದ ಸಹಾಯದಿಂದ ಆರ್ಚಕರು ದೇವಾಲಯಕ್ಕೆ ತೆರಳಿ ಪೂಜೆ ನೇರವೇರಿಸಿದ್ದಾರೆ. ಅಲ್ಲದೇ ದೇವಾಲಯಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದರು. ಇನ್ನೂ ದೇವಾಲಯ ಜಲಾವೃತ್ತಗೊಂಡಿರುವುದರಿಂದ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಗ್ರಾಮಸ್ಥರು ಎದುರಿಸುವಂತೆ ಆಗಿದೆ.