ಜಿ ಟಿ ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ: ಹೆಚ್ ಡಿ ಕುಮಾರಸ್ವಾಮಿ
ಮೈಸೂರು: ಜಿ.ಟಿ.ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ. ತುಂಬಾ ದಿನ ಸುಳ್ಳು ಹೇಳಿಕೊಂಡು ತಿರುಗಾಡೋಕಾಗಲ್ಲ. ಸಾ.ರಾ.ಮಹೇಶ್‌ರನ್ನ ನಾನು ಬೆಳೆಸಿದೆ ಅಂತ ಹೇಳಿದ್ದಾರೆ. ದೇವೇಗೌಡರ ಜೊತೆ ಮಾತನಾಡಿದ್ದೇನೆ ಬೆಳಗ್ಗೆ ಮಂತ್ರಿಯಾಗ್ತಿಯಾ ಹೋಗು ಅಂತ ಹೇಳಿದ್ದರು. ಆದರೆ, ಯಾರ ಜೊತೆಯೂ ಅವರು ಮಾತುಕತೆ ನಡೆಸಿರಲಿಲ್ಲ. ಸಾ.ರಾ.ಮಹೇಶ್ ಅವರನ್ನು ಮಂತ್ರಿ ಮಾಡಿದವನು ನಾನು ಇವರಲ್ಲ ಎಂದು ಜೆಟಿ ದೇವೇಗೌಡರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಮಂತ್ರಿ ಆಗಿದ್ದಾಗ ಬಿಡುವಿರಲಿಲ್ಲ ಅವರಿಗೆ ಈಗ ಬಿಡುವು ಮಾಡಿಕೊಂಡು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಮೈದಾನ ದೊಡ್ಡದಿದೆ, ಯಾರು ಏನು ಬೇಕಾದರೂ ಮಾಡಲಿ ಪ್ರತಿ ದಿನ ಹೂ ಮುಡಿಸಲು ಸಾಧ್ಯವಿಲ್ಲ ಎಂದರು.
ಜೆಡಿಎಸ್‌ನಿಂದ ಜಿಟಿಡಿ ಉಚ್ಚಾಟನೆ ಮಾಡುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದರೆ, ಮೈಸೂರು ಭಾಗದ ಬೆಳಗವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡಿದ್ರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಜಿಟಿ ದೇವೇಗೌಡರು ಬೆಳಗ್ಗೆ ಎದ್ದು ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್ ಹಾಗೂ ಸಂಜೆಯಾಗುತ್ತಲೇ ಬಿಜೆಪಿ ಕಡೆ ಹೋಗುತ್ತಾರೆ. ಕೊನೆಗೆ ಎಲ್ಲೂ ಗೀಟಲಿಲ್ಲ ಅಂದ್ರೆ ಮತ್ತೆ ಜೆಡಿಎಸ್ ಬಾಗಿಲಿಗೆ ಬರುತ್ತಾರೆ. ಅದು ಚೆನ್ನಾಗಿ ಗೊತ್ತು, ನಾನು ರಾಜಕೀಯದಲ್ಲಿ ಇರುವವರೆಗೂ ಮತ್ತೆ ಜಿಟಿಡಿ ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ನನ್ನ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು. ಜಿಲ್ಲೆಯನ್ನ ನಿಮ್ಮ ಮುಂದಾಳತ್ವದಲ್ಲಿ ನಡೆಸಿ ಎಂದು ಸಾ.ರಾ ಮಹೇಶ್ ಹೋಗಿ ಮಾತನಾಡಿದರು. ಭೇಟಿ ಮಾಡಿದ್ದ ವಿಷಯ ನನಗೂ ಗೊತ್ತು. ಸಾ.ರಾ ಕೂಡ ಏನಾರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಅವರು ಈಗ ಸ್ವಾತಂತ್ರ್ಯ ಎಲ್ಲಿ ಬೇಕಾದರೂ ಹೋಗಬಹುದು. ಈ ವಿಷಯವನ್ನ ಇನ್ನು ಎಳೆದುಕೊಂಡು ಹೋಗಲ್ಲ ಎಂದರು.
ಸಿದ್ದರಾಮಯ್ಯಗೆ ಜೆಡಿಎಸ್ ಬಗ್ಗೆ ಮಾತನಾಡುವುದು ಹೆಚ್ಚು
ಜೆಡಿಎಸ್ ಪಕ್ಷ ರಾಜಕೀಯ ಪಕ್ಷ ಅಲ್ಲದ ಮೇಲೆ ಪದೇ ಪದೇ ಜೆಡಿಎಸ್ ಬಗ್ಗೆ ಯಾಕೆ ಮಾತನಾಡುತ್ತಾರೆ. ಮಾತನಾಡುವ ಅವಶ್ಯಕತೆಯೇ ಇಲ್ಲ. ಸಿದ್ದರಾಮಯ್ಯಗೆ ಅವರ ಪಕ್ಷಕ್ಕಿಂತ ಜೆಡಿಎಸ್ ಬಗ್ಗೆ ಮಾತನಾಡೋದೆ ಜಾಸ್ತಿ ಆಗಿದೆ ನಮಗೆ ಐಡಿಯಾಲಾಜಿ ಇದೆ ಅವರಿಗೆ ಐಡಿಯಾಲಾಜಿ ಕೊರತೆ ಇದೆ. ಜೆಡಿಎಸ್ ನ ಶಕ್ತಿ ಏನು ಎಂದು ನಮ್ಮ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.