ಬೆಂಗಳೂರು : ಹೊರರಾಜ್ಯಗಳಿಂದ ಮಹಿಳೆಯ ಹಾಗೂ ಯುವತಿಯರನ್ನ ಕೆಲಸಕ್ಕೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ನಾಲ್ವರು ಆರೋಪಿಗಳನ್ನ ಹೊಸಕೋಟೆ ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಲಿಯಾ ತಾಜ್ ಮೇಡಹಳ್ಳಿ ವಾಸಿ, ಅಂಬಿಕಾ ಹೊಸಕೋಟೆ ಟೌನ್, ಸೋಮಶೇಖರ್ ಭಟ್ರಹಳ್ಳಿ, ಪ್ರಸನ್ನ ಕುಂಬಳಹಳ್ಳಿ ವಾಸಿಗಳು ಎಂದು ತಿಳಿದು ಬಂದಿದೆ.
ಅಂದಹಾಗೆ ಕಳೆದ ಎರಡು ದಿನಗಳಿಂದೆ ಹೊಸಕೋಟೆ ಟೌನ್ನ ಬಸವೇಶ್ವರ ನಗರದಲ್ಲಿ ಹೊರರಾಜ್ಯಗಳಿಂದ ಕೆಲಸದ ಅಮಿಸಹೋಡ್ಡಿ ಯುವತಿಯರನ್ನ ಕರೆದುಕೊಂಡು ಬಂದು ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದದ್ದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಹೊಸಕೋಟೆ ಪೊಲೀಸರು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ವೇಶ್ಯಾವಾಟಿಕೆ ದಂದೆಗೆ ಬಳಸಿಕೊಂಡಿದ್ದ ಕೊಲ್ಕತ್ತಾ ಮೂಲದ 25 ವರ್ಷದ ಸಂತ್ರಸ್ತ ಯುವತಿಯನ್ನು ರಕ್ಷಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ವೇಶ್ಯಾವಾಟಿಕೆ ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್ ಹಾಗೂ 1,120 ನಗದು ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದಹಾಗೆ ಆರೋಪಿಗಳು ಹೊಸಕೋಟೆ ಪಟ್ಟಣದಲ್ಲಿ ವೇಶ್ಯಾವಾಟಿಕೆ ನಡೆಸಲೇ ಮನೆಯೊಂದನ್ನ ಮಾಡಿಕೊಂಡಿದ್ದರು. ಈ ಮನೆಗೆ ಹೊರ ರಾಜ್ಯ ಸೇರಿದಂತೆ ಸ್ಥಳೀಯ ಹುಡುಗಿಯರನ್ನು ಮಾನವ ಸಾಗಾಣಿಕೆ ಮಾಡಿಕೊಂಡು ಬಂದು ಗಿರಾಕಿಗಳನ್ನು ಮನೆಗೆ ಬರಮಾಡಿಕೊಳ್ಳುತ್ತಿದ್ದರಂತೆ. ಜತೆಗೆ ವೇಶ್ಯಾವಾಟಿಕೆ ದಂದೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.