ಕುಡಿದ ಮತ್ತಿನಲ್ಲಿ ಕ್ಷುಲಕ ಕಾರಣಕ್ಕೆ ಕಾಲಿನಿಂದ ಒದ್ದಿದ್ದಕ್ಕೆ ಸಿಟ್ಟಿಗೆದ್ದ ಸ್ನೇಹಿತ ಹಾಲೊ ಬ್ರಿಗ್ಸ್ ತಲೆ ಮೇಲೆ ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಡಿಜೆ ಹಳ್ಳಿಯ ಶ್ರೀನಿವಾಸನಗರ ನಿವಾಸಿ ನಿತೇಶ್ ಹತ್ಯೆಯಾದ ವ್ಯಕ್ತಿ. ಪ್ರಶಾಂತ್ ಕೊಲೆ ಮಾಡಿದ ವ್ಯಕ್ತಿ.
ಸ್ನೇಹಿತರು ಇಬ್ಬರು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದ್ದು, ಈ ವೇಳೆ ಪ್ರಶಾಂತ್ ಗೆ ಕಾಲಿನಿಂದ ನಿತೇಶ್ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಗಲಾಟೆ ಅಲ್ಲಿಗೆ ಮುಗಿದಿದ್ದು, ಇಬ್ಬರು ಒಟ್ಟಿಗೆ ಮಲಗಿದ್ದರು.
ಮಲಗಿದ ಸ್ವಲ್ಪ ಸಮಯದ ಎಚ್ಚರಗೊಂಡ ಪ್ರಶಾಂತ್, ನನಗೆ ಒದೆಯುತ್ತಿಯಾ ಎಂದು ಕೋಪಗೊಂಡ ಹಾಲೊ ಬಿಗ್ಸ್ ಅನ್ನು ನಿತೇಶ್ ತಲೆಮೇಲೆ ಹಾಕಿದ. ಇದರಿಂದ ನಿತೇಶ್ ಸ್ಥಳದಲ್ಲೇ ಮೃತಪಟ್ಟಿದ್ದ.
ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರ ಭೇಟಿ ನೀಡಿ ಪರಾರಿಯಾಗಲು ಯತ್ನಿಸಿದ್ದ ಪ್ರಶಾಂತ್ ನನ್ನು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.