ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಶತಕ ದಾಟಿದೆ. ಕೇಂದ್ರ ಸರ್ಕಾರವು ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 29 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಬೆಲೆ ಹೆಚ್ಚಳ ಮಾಡಿದೆ.
ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಭಾರತದ 7 ರಾಜ್ಯಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಕರ್ನಾಟಕದ ಉತ್ತರ ಕನ್ನಡದ ಶಿರಸಿ, ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ 99 ರೂ. ಗಡಿಯಲ್ಲಿದ್ದು, ಮುಂದಿನ ವಾರದೊಳಗೆ ಶತಕ ಬಾರಿಸುವ ಸಾಧ್ಯತೆಯಿದೆ.
ಬೆಂಗಳೂರು- ಪೆಟ್ರೋಲ್ 99.05 ರೂ, ಡೀಸೆಲ್ 91.97 ರೂ, ಭೂಪಾಲ್- ಪೆಟ್ರೋಲ್ 104.01 ರೂ, ಡೀಸೆಲ್ 95.35 ರೂ, ಜೈಪುರ – ಪೆಟ್ರೋಲ್ 102.44 ರೂ, ಡೀಸೆಲ್ 95.67 ರೂ. ಬೆಂಗಳೂರು- ಪೆಟ್ರೋಲ್ 99.05 ರೂ., ಡೀಸೆಲ್ 91.97 ರೂ, ಭೂಪಾಲ್- ಪೆಟ್ರೋಲ್ 104.01 ರೂ, ಡೀಸೆಲ್ 95.35 ರೂ, ಜೈಪುರ – ಪೆಟ್ರೋಲ್ 102.44 ರೂ, ಡೀಸೆಲ್ 95.67 ರೂಪಾಯಿ ದಾಖಲಾಗಿದೆ.