ದೇಶದ ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಶತಕದ ಗಡಿ ದಾಟಿದ ನಂತರವೂ ಸತತವಾಗಿ ಬೆಲೆ ಏರಿಕೆ ಆಗುತ್ತಲೇ ಇದ್ದು, ಬುಧವಾರ ಕೂಡ ತೈಲ ದರ ಏರಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿದ್ದರ ಪರಿಣಾಮ ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ತಲಾ 25 ಪೈಸೆ ಏರಿಸಿವೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 95.56 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 86.47 ರೂ.ಗೆ ಏರಿಕೆಯಾಗಿದೆ.
ಮೇ 4ರ ನಂತರ ದೇಶದಲ್ಲಿ 22 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 98.75 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 91.67 ರೂ.ಗೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 101.76 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 86.47 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ 96.94 ರೂ. ಹಾಗೂ ಡೀಸೆಲ್ 91.15 ರೂ. ಕೋಲ್ಕತಾದಲ್ಲಿ ಪೆಟ್ರೋಲ್ ದರ 95.52 ರೂ. ಹಾಗೂ ಡೀಸೆಲ್ ದರ 89.32 ರೂ. ಆಗಿದೆ.