ಸ್ನೇಹಿತನ ಜೊತೆ ಸುತ್ತಾಡಲು ಬಂದಿದ್ದ ಯುವತಿ ಮೇಲೆ ಪಾನಮತ್ತ ಯುವಕರು ಗ್ಯಾಂಗ್ ರೇಪ್ ನಡೆಸಿದ ಅಮಾನುಷ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂಬ ದೂರು ಬಂದಿದ್ದು, ಸ್ಥಳಕ್ಕೆ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ಜೊತೆ ಬಂದಿದ್ದ ಸ್ನೇಹಿತನನ್ನು ಥಳಿಸಿದ 5ರಿಂದ 6 ಜನ ಪಾನಮತ್ತ ಯುವಕರು ನಂತರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.