ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯ ಆನಂದನಗರದ ಬಳಿಯ ಸೇತುವೆ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ, ಮೂವರನ್ನು ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಪಾಲ ವಾಲ್ಮೀಕಿ, ಮಹ್ಮದ ಜಾಫರ್ ಹೆಬಸೂರ, ಆನಂದನಗರದ ರಬ್ಬಾನಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಗೋಪಾಲ ವಾಲ್ಮೀಕಿ ಎಂಬಾತನ ಮೇಲೆ ಈಗಾಗಲೇ ಹಳೇ ಹುಬ್ಬಳ್ಳಿ ಠಾಣೆಯಲ್ಲಿಯೇ ಎಂಟು ಪ್ರಕರಣಗಳು ಚಾಲ್ತಿಯಲ್ಲಿವೆ ಎಂದು ಹೇಳಲಾಗಿದೆ.
ಈತನ ಜೊತೆಗೆ ಮಹ್ಮದ ಜಾಫರ್ ಹೆಬಸೂರ ಹಾಗೂ ಆನಂದನಗರದ ರಬ್ಬಾನಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದ್ದು, ಬಂಧಿತ ಆರೋಪಿಗಳಿಂದ 400 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಹಳೇ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.