ವಾಸವಿದ್ದ ಮನೆಯಲ್ಲೇ ಹೈಡ್ರೋ ಗಾಂಜಾ ಬೆಳೆದಿದ್ದ ಇರಾನಿ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 150 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಡದಿ ಈಗಲ್ ಟನ್ ರಿಸಲ್ಟ್ ನಾ ವಿಲ್ಲಾದಲ್ಲಿ ವಾಸವಿದ್ದ ಜಾವಿದ್ ರುಸ್ತುಂ ಪುರಿ (36) ಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಒಂದೂವರೆ ವರ್ಷದಿಂದ ಈಗಲ್ ಟನ್ ವಿಲ್ಲಾದಲ್ಲೆ ವಾಸವಿದ್ದ ಜಾವಿದ್ ರುಸ್ತುಂ ಮನೆಯ ಟರೇಸ್ ಹಾಗೂ ರೂಮ್ ನಲ್ಲಿ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆದಿದ್ದು, ಇದನ್ನು ಮಿಶ್ರಣ ಮಾಡಲು ಬಳಸುವ ಕೆಮಿಕಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆನ್ ಲೈನ್ ಮುಖಾಂತರ ಗಾಂಜಾ ಸೀಡ್ಸ್ ಗಳನ್ನು ತರಿಸಿಕೊಂಡಿದ್ದ ಆರೋಪಿ, ಗಾಂಜಾ ಗಿಡಗಳನ್ನು ಬೆಳೆದಿದ್ದು, ಇದರ ಬೆಲೆ ಸುಮಾರು ಮೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.