ಕಿರುತೆರೆಯ ಮುದ್ದಾದ ಜೋಡಿ:ಅಮೂಲ್ಯ- ವೇದಾಂತ್ ಪ್ರೇಮ್ ಕಹಾನಿ..!
ಬೆಂಗಳೂರು. ಕಿರುತೆರೆ ಲೋಕದಲ್ಲಿ ತನ್ನದೇ ಆದ ಸ್ಪೆಷಾಲಿಟಿಗಳಿಂದ ಸುದ್ದಿ ಮಾಡ್ತಿರೋ ಸೀರಿಯಲ್ ಗಟ್ಟಿಮೇಳ. ಅದ್ರಲ್ಲೂ ವೇದಾಂತ್ – ಅಮೂಲ್ಯ ಸೃಷ್ಟಿಸಿರೋ ಕ್ರೇಜ್ ಇದೆಯಲ್ಲಾ, ಅಬ್ಬಬ್ಬ ಅದೇಷ್ಟ್ ಹೇಳಿದ್ರು ಸಾಲದು. ಮೊದಲೆಲ್ಲಾ ಜಗಳ ಆಡ್ತಾನೆ ಪ್ರೇಕ್ಷಕರನ್ನ ರಂಜಿಸಿದ್ದ ಈ ಜೋಡಿ, ಲವ್ವಲ್ಲಿ ಬಿದ್ದಿದ್ದೇ ಬಿದ್ದಿದ್ದು, ಯಾವಾಗ ಈ ಲವ್ವರ್ಸ್ ಗಳು ತಮ್ಮ ತಮ್ಮ ಪ್ರೀತಿಯನ್ನ ಹೇಳ್ಕೊಳ್ತಾರೋ ಅಂತಾ ಕಾಯ್ತಿದ್ರು.

ಪ್ರತಿ ಕೆಲಸವನ್ನ ಸ್ಪೆಷಲ್ ಆಗಿ ಮಾಡೋ ವೇದಾಂತ್, ತಮ್ಮ ಪ್ರೀತಿನ ಹಾಗೆಲ್ಲಾ ಸುಮ್ನೆ ಸುಮ್ನೆ ಹೇಳ್ಕೋಳ್ತಾನಾ.? ಅದಕ್ಕಾಗಿನೆ ತಮ್ಮ ಹುಡ್ಗಿ ಅಮೂಲ್ಯರನ್ನ, ಜಗತ್ತಿನ ಎಲ್ಲ ಪ್ರೇಮಿಗಳ ಪಾಲಿನ ಪ್ರೇಮ ಸೌಧ ಅಂತಲೇ ಕರೆಸಿಕೊಳ್ಳೊ ತಾಜ್ ಮಹಲ್ ಮುಂದೆ ಲವ್ ಪ್ರಪೋಸ್ ಮಾಡಿದ್ದಾನೆ.

ಈ ಸೀನ್ ಅನ್ನ ತುಂಬಾ ಸ್ಪೆಷಲ್ ಆಗಿ ಮಾಡ್ಬೇಕು ಅನ್ನೋದು ಡೈರೆಕ್ಟರ್ ಕೋರಮಂಗಲ ಅನಿಲ್ ಕನಸಾಗಿತ್ತು, ವ್ಯಾಲೆಂಟೆನ್ಸ್ ಡೇ ಗೆ ಸ್ಪೆಷಲ್ ಆಗಿ ಈ ಪ್ರೇಮಿಗಳ ಪ್ರೀತಿಯನ್ನ ಕಿರುತೆರೆ ಪ್ರೇಕ್ಷಕರಿಗೆ ಹಂಚಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದ ಟೀಂ, ತಾಜ್ ಮಹಲ್ ಹೋಗಿ ಚಿತ್ರೀಕರಣ ಮಾಡಿದ್ದಾರೆ, ಅದರ ಮೇಕಿಂಗ್ ನೋಡ್ತಿದ್ರೆ ಸಖತ್ ಥ್ರೀಲ್ ಆಗೋದಂತು ಖಂಡಿತಾ.

ಸಿನಿಮಾ ಅಷ್ಟೇ ಅಲ್ಲಾ ಸೀರಿಯಲ್ಸ್ ಸಹ ಈಗಂತೂ ಸಿಕ್ಕಾಪಟ್ಟೆ ರಿಚ್ ಆಗಿ ಮೂಡಿಬರ್ತಿವೆ, ಅದಕ್ಕೆ ಈ ಮೇಕಿಂಗೇ ಸಾಕ್ಷಿ. ಕೊನೆಗೂ ಅಮೂಲ್ಯಗೆ ವೇದಾಂತ್ ಪ್ರಪೋಸ್ ಮಾಡಿದ್ದು, ಅವ್ರ ಇಬ್ಬರು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟಿದೆ. ಇವ್ರ ಪ್ರೀತಿ ಹೀಗೆ ಸಾಗ್ಲಿ ಅನ್ನೋದೆ ಕಿರುತೆರೆ ಪ್ರೇಕ್ಷಕರ ಮನದಾಸೆಯಾಗಿದೆ.