ವಿವಾದಗಳ ಹಿನ್ನೆಲೆಯಲ್ಲಿ ವರ್ಗಗೊಂಡ ರೋಹಿಣಿ ಸಿಂಧೂರಿ ಅನುಸ್ಥಿತಿಯಲ್ಲಿ ಗೌತಮ್ ಬಗಾದಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ನೂತನ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಗೌತಮ್ ಬಗಾದಿ ಭಾನುವಾರ ಕಚೇರಿಗೆ ಆಗಮಿಸಿ ಸುಮಾರು ಅರ್ಧಗಂಟೆ ಕಾದರು. ಆದರೆ ವರ್ಗಗೊಂಡ ರೋಹಿಣಿ ಸಿಂಧೂರಿ ಅಧಿಕಾರ ಹಸ್ತಾಂತರಕ್ಕೆ ಬಾರದ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲೇ ಅಧಿಕಾರ ಸ್ವೀಕರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಗೌತಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದು, ಜಿ.ಪಂ ಸಿಇಓ ಉಪಸ್ಥಿತರಿದ್ದರು.
ವಾಟ್ಸಪ್ ಮೂಲಕ ಮೈಸೂರು ಜನತೆಗೆ ಧನ್ಯವಾದ ತಿಳಿಸಿರುವ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂದಿಗ್ದ ಪರಿಸ್ಥಿತಿಯಲ್ಲಿ ನಾನು ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.