ಬೆಂಗಳೂರು: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 48,070ರೂ.ಗಳಿಗೆ ಏರಿಕೆಯಾಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 44,060ರೂ. ಗಳಿಗೆ ಏರಿಕೆಯಾಗಿದೆ. ಇನ್ನು, ದೇಶಾದ್ಯಂತ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 47,160ರೂ., 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 46,160ರೂ. ಇದೆ.
ಚೆನ್ನೈ, ದೆಹಲಿ, ಕೋಲ್ಕತ್ತಾ, ಲಖ್ನೌ, ಮಧುರೈ, ಜೈಪುರ ಮತ್ತು ಅಹಮದಾಬಾದ್ ಸೇರಿದಂತೆ ಕೆಲವು ನಗರಗಳಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿಯ ಬೆಲೆ 67 ಸಾವಿರ ರೂ. ನಿಂದ 68,700 ರೂ.ಗೆ ಏರಿಕೆಯಾಗಿದೆ. ಚೆನ್ನೈ, ಮದುರೈ, ವಿಶಾಖಪಟ್ಟಣಂ, ಭುವನೇಶ್ವರದಲ್ಲಿ ಬೆಳ್ಳಿಯ ಬೆಲೆ 73,500 ರೂ. ದಾಟಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.