ಚಿನ್ನ ಪಾಲಿಶ್ ಮಾಡಿಕೋಡುವುದಾಗಿ ಪಾಲಿಕೆ ಸದಸ್ಯೆಗೆ ಪಂಗನಾಮ..

ಹುಬ್ಬಳ್ಳಿ: ಚಿನ್ನ ತೊಳೆದು ಕೊಡುವ ನೆಪದಲ್ಲಿ ಮಹಿಳೆಯೋರ್ವಳನ್ನ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ-ಬಂಗಾರ ಲೂಟಿ ಮಾಡಿದ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯ ಸರಕಾರಿ ಶಾಲೆಯ ಹಿಂಭಾಗ ನಡೆದಿದೆ.

ವಿಷ್ಣುಸಾ ಪವಾರ ಎಂಬುವವರ ಮನೆಯಲ್ಲಿ ಸರೋಜಾ ಹಾಗೂ ಸೊಸೆ ಅನಿತಾ ಎಂಬುವವರೇ ಮೋಸಕ್ಕೆ ಒಳಗಾಗಿದ್ದು, ಆರು ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ. ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಸೊಸೆಯನ್ನ ಒಳಗಡೆ ಅತ್ತೆಯನ್ನ ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ ಒಳಗಡೆ ಕಳಿಸಿದ್ದಾರೆ.ತದ ನಂತರ ಬಂಗಾರ ದೋಚಿ ಎಸ್ಕೇಪ್ ಆಗಲು ಅಣಿಯಾಗಿದ್ದ ವಂಚಕರನ್ನ ತಡೆಯಲು ಮಹಿಳೆ ಮುಂದಾಗಿದ್ದಾಳೆ
ತಕ್ಷಣವೇ ಮಹಿಳೆ ಬಾಗಿಲು ಹಾಕಲು ಪ್ರಯತ್ನಪಟ್ಟಿದ್ದಾರೆ. ಆದ್ರೆ ವಂಚಕರು ಮಹಿಳೆಯನ್ನ ತಳ್ಳಿ ಕ್ಷಣಾಧದಲೇ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಳೆಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.