ಕೊರೊನಾ ಲಸಿಕೆ ಪಡೆದು ಅಡ್ಡಪರಿಣಾಮಗಳ ಕುರಿತು ಸಂಶೋಧನೆ ಮಾಡುತ್ತಿರುವ ಕೇಂದ್ರ ಸರಕಾರ ನಿಯೋಜತ ತಜ್ಞರ ಕೊರೊನಾ ಲಸಿಕೆಗೆ ಮೊದಲ ಬಲಿಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿದೆ.
ಮಾರ್ಚ್ 8ರಂದು ಕೋವಿಡ್ ಲಸಿಕೆ ಪಡೆದಿದ್ದ 68 ವರ್ಷ ವೃದ್ಧ ವ್ಯತಿರಿಕ್ತ ಪರಿಣಾಮಗಳಿಂದ ಮೃತಪಟ್ಟಿದ್ದಾರೆ ಎಂದು ತಜ್ಞರ ಸಮಿತಿ ಘೋಷಿಸಿದೆ.
ಕೊರೊನಾ ಲಸಿಕೆ ಪಡೆದ ನಂತರ ಸುಮಾರು 36 ಜನರಲ್ಲಿ ಅಡ್ಡಪರಿಣಾಮಗಳು ಕುಂಡು ಬಂದಿದ್ದು, ಇದರಲ್ಲಿ ಒಬ್ಬರು ಲಸಿಕೆ ಪಡೆದಿದ್ದರಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ರಾಷ್ಟ್ರೀಯ ಎಇಎಫ್ ಸಮಿತಿ ಅಧ್ಯಕ್ಷ ಡಾ.ಎನ್.ಕೆ. ಅರೋರಾ ಹೇಳಿದ್ದಾರೆ.