ಕೊರೊನಾ ಲಸಿಕೆ ಹಂಚಿಕೆ ನೀತಿಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ರಾಜ್ಯ ಸರಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ಲಸಿಕೆ ಕೊರತೆ ಅನುಭವಿಸುತ್ತಿರುವ ಬಗ್ಗೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದು, ಕೇಂದ್ರದ ಕೊರೊನಾ ಲಸಿಕೆ ನೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ದೇಶದ ಜನರಿಗೆ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರಕಾರಕ್ಕೆ ಹೊರತು ರಾಜ್ಯ ಸರಕಾರಗಳದ್ದು ಅಲ್ಲ ಎಂದು ಹೇಳಿದೆ.
ಕೇಂದ್ರ ಸರಕಾರ ಲಸಿಕೆ ವಿತರಣೆಗೆ 35 ಸಾವಿರ ಕೋಟಿ ರೂ.ವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದೆ. ಇದನ್ನು ಎಲ್ಲಿ ಎಷ್ಟು ಬಳಸಿದ್ದೀರಿ? ಲಸಿಕೆ ವಿತರಣೆ ಕುರಿತು ನಮಗೆ ಅಫಿದಾವಿತ್ ಮೂಲಕ ಸಂಪೂರ್ಣ ವಿವರ ನೀಡಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ದೇಶದ 18ರಿಂದ 44 ವರ್ಷದವರೆಗಿನರಿಗೆ ಲಸಿಕೆ ನೀಡುವುದಾಗಿ ಘೋಷಿಸಿದ್ದೀರಿ. ಆದರೆ ಲಸಿಕೆಯನ್ನು ಪೂರೈಸಿದ ಲಾಜಿಸ್ಟಿಕ್, ಪ್ಯಾಕಿಂಗ್ ಸೇರಿದಂತೆ ಸಂಪೂರ್ಣ ವಿವರ ನೀಡಿ. ಅಲ್ಲದೇ ದೇಶಾದ್ಯಂತ ಲಸಿಕೆಗೆ ಏಕರೂಪ ದರ ನಿಗದಿಪಡಿಸುವಂತೆ ಸೂಚಿಸಿದೆ.