ಪುಣೆಯ ಸೆರಮ್ ಇನ್ಸಿಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೋವೋವ್ಯಾಕ್ಸ್ ಕೊರೊನಾ ಲಸಿಕೆಯನ್ನು 2ರಿಂದ 17 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗ ಮಾಡಬಾರದು ಎಂದು ಕೇಂದ್ರ ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಕೋವೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಡ್ರಗ್ ಕಂಟ್ರೋಲ್ ಆಫ್ ಇಂಡಿಯಾದಿಂದ ಅನುಮತಿ ಪಡೆಯಬೇಕಾಗಿದೆ. ಈಗಾಗಲೇ 920 ಮಕ್ಕಳನ್ನು ಗುರುತಿಸಿದ್ದು, 12ರಿಂದ 17 ವರ್ಷದೊಳಗಿನ 460 ಮಕ್ಕಳನ್ನು ವಯೋಮಿತಿ ಆಧಾರದಲ್ಲಿ ವಿಭಾಗಿಸಲಾಗಿದೆ.
ಕೋವೋವ್ಯಾಕ್ಸ್ ಲಸಿಕೆಗೆ ಯಾವುದೇ ದೇಶದಿಂದ ಅನುಮತಿ ದೊರೆತಿಲ್ಲ. ಆದ್ದರಿಂದ ಮಕ್ಕಳ ಮೇಲೆ ಪ್ರಯೋಗ ಮಾಡುವುದು ಸದ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.