ರಾಯಚೂರು: ಸರ್ಕಾರದ ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶದಲ್ಲಿನ ಲೋಪ-ದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ, ರಾಯಚೂರು ಜಿಲ್ಲಾ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದಿಂದ ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಟಿಪ್ಪುಸುಲ್ತಾನ್ ಉದ್ಯಾನ ವನದಲ್ಲಿ ನೂತನವಾಗಿ ಸರ್ಕಾರ ಹೊರಡಿಸಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶವನ್ನು ಹಿಂಪಡೆಯಬೇಕೆಂದು ಎಂದು ಆಗ್ರಹಿಸಿದರು.
ಸರ್ಕಾರ ಈ ಆದೇಶದಲ್ಲಿ ಶೇಕಡಾ 50 ರಷ್ಟು ಅತಿಥಿ ಉಪನ್ಯಾಸಕರು ನೇಮಕಾತಿ ಮಾಡಿಕೊಳ್ಳಬೇಕು, ಮತ್ತು ಮಾರ್ಚ್ 31 ರವರೆಗೆ ಅವರ ಸೇವೆಯನ್ನು ಪರಿಗಣಿಸಬೇಕೆಂದು ಎಂದು ಆದೇಶಿಸಿದೆ. ಜಿಲ್ಲೆಯಲ್ಲಿ 14500 ಅತಿಥಿ ಉಪನ್ಯಾಸಕರಿದ್ದು, ಇದರಲ್ಲಿ 750 ಜನ ವಯೋಮಿತಿಯಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ 1ವರ್ಷದ ಕಾಲ ಉದ್ಯೋಗವಿಲ್ಲದೆ ತೊಂದರೆ ಅನುಭವಿಸಿದ್ದೇವೆ. ಈಗ ಮತ್ತೆ ಸರಕಾರದ ಹೊಸ ಆದೇಶದಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.