ಗುಜರಾತ್ ನ ಮುದ್ರಾ ಬಂದರಿನಲ್ಲಿ 9000 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದು ಜಗತ್ತಿನಲ್ಲೇ ಅತೀ ದೊಡ್ಡ ಮಾದಕ ದ್ರವ್ಯ ಪತ್ತೆ ಎಂದು ಅಂದಾಜಿಸಲಾಗಿದೆ.
ರೆವಿನ್ಯೂ ಗುಪ್ತಚರ ಇಲಾಖೆ ನಿರ್ದೇಶನಾಲಯ ಕಚ್ ನ ಮುದ್ರಾ ಬಂದರ್ ಗೆ ಆಫ್ಘಾನಿಸ್ತಾನದ ಮೂಲಕ ಬಂದಿದ್ದ ಕಂಟೇನರ್ ನಲ್ಲಿ ಮಾದಕ ದ್ರವ್ಯ ಪತ್ತೆಹಚ್ಚಿದೆ.
ಶೌಚಾಲಯ ಸ್ವಚ್ಛಗೊಳಿಸುವ ಪೌಡರ್ ಎಂದು ಹೆರಾಯಿನ್ ಅನ್ನು ಕಂಟೇನರ್ ನಲ್ಲಿ ತುಂಬಿಸಿ ಭಾರತಕ್ಕೆ ತರಲಾಗಿತ್ತು. ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಆಶೀ ಟ್ರೇಡಿಂಗ್ ಕಂಪನಿ ಇದನ್ನು ಆಮದು ಮಾಡಿಕೊಂಡಿತ್ತು. ಆಫ್ಘಾನಿಸ್ತಾನದ ಕಂದಹಾರ್ ನಿಂದ ನಿಷೇಧಿತ ಹೆರಾಯಿನ್ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.