ಕಾಂಡೋಮ್ ತರಲು ಮರೆತಿದ್ದರಿಂದ ಗುಜರಾತ್ ಮೂಲದ ವ್ಯಕ್ತಿಯೊಬ್ಬ ಮರ್ಮಾಂಗಕ್ಕೆ ಗಮ್ ಸುರಿದುಕೊಂಡಿದ್ದರಿಂದ ಮೃತಪಟ್ಟ ಆಘಾತಕಾರಿ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಮಾಜಿ ಫಿಯಾನ್ಸಿ ಜೊತೆ ಹೋಟೆಲ್ ಗೆ ಆಗಮಿಸಿದ್ದ 25 ವರ್ಷದ ಸಲ್ಮಾನ್ ಹೋಟೆಲ್ ರೂಮ್ ನಿಂದ ಹೊರಬರುತ್ತಿದ್ದಂತೆ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾನೆ.
ಸಲ್ಮಾನ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮೊದಲು ನಿರ್ಧರಿಸಿದ್ದರು. ಆದರೆ ನಂತರ ತನಿಖೆ ಮುಂದುವರಿದಾಗ ಸತ್ಯ ಸಂಗತಿ ತಿಳಿದು ಸ್ವತಃ ಪೊಲೀಸರೇ ಆಘಾತಕ್ಕೆ ಒಳಗಾಗಿದ್ದಾರೆ.
ಸಲ್ಮಾನ್ ಸೆಕ್ಸ್ ಗೆ ಮುನ್ನ ತನ್ನ ಮರ್ಮಾಂಗವನ್ನು ಗಮ್ ಅಂಟಿಸಿ ಸೀಲ್ ಮಾಡಿದ್ದ. ಇದರಿಂದ ಬಹು ಅಂಗಾಂಗ ವೈಫಲ್ಯ ಉಂಟಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.