ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಧಿಕಾರ ನಡೆಸಿದ್ದಕ್ಕಿಂತ ಹೆಚ್ಚಾಗಿ ಜೈಲಿನಲ್ಲಿ ಕಳೆದವರು. ಅಂತಹ ನೆಹರು ಅವರ ಬಗ್ಗೆ ಸಿ.ಟಿ. ರವಿ ಅವಹೇಳನಕಾರಿ ಮಾತು ಯಾರೂ ಮೆಚ್ಚುವಂಥದ್ದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಅವರ ಬಗ್ಗೆ ಸಿ.ಟಿ. ರವಿ ಅವರ ಅವಹೇಳನಕಾರಿ ಮಾತು ಯಾರು ಮೆಚ್ಚುವಂಥದ್ದಲ್ಲ. ಸಿ.ಟಿ. ರವಿಗೂ ಮತ್ತು ಬಿಜೆಪಿಗೂ ಈ ಮಾತು ಶೋಭೆ ತರುವುದಿಲ್ಲ ಎಂದರು.
ಸಿ.ಟಿ.ರವಿ ಅವರು ನೆಹರು ಬಗ್ಗೆ ಓದಿಕೊಳ್ಳಬೇಕು. ವಾಜಪೇಯಿ ಅವರು ನೆಹರು ನಿಧಾನರಾದಾಗ ಏನೂ ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರು ಅವರ ಬಗ್ಗೆ ವಾಜಪೇಯಿ ಅವರು ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ನೆಹರು ಅವರ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು ಎಂದು ಸಲಹೆ ನೀಡಿದರು.
ನಿಮಗೆ ನೆಹರು ಬಗ್ಗೆ ಏನೂ ಗೊತ್ತಿದೆ? ಏನೂ ತಿಳಿದು ಕೊಂಡಿದ್ದೀರಿ? ಭಾರತದ ಆಸ್ಮಿತೆ ನೆಹರು. ಭಾರತದ ಗರ್ವದ ಸಂಕೇತ ನೆಹರು. ಇಂತಹ ನೆಹರು ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು. ಪ್ರಚಾರಕ್ಕಾಗಿ, ಯಾರನ್ನೋ ಓಲೈಸಲು ನೀವು ರೀತಿ ಮಾತಾಡಬೇಡಿ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿದ್ದಾರೆ. ಇದು ಖಂಡನೀಯ. ನೆಹರು, ವಾಜಪೇಯಿ ಇಬ್ಬರು ಈ ದೇಶದ ಶ್ರೇಷ್ಠ ಆಡಳಿಗಾರರು. ಪ್ರಿಯಾಂಕಾ ಖರ್ಗೆ ತಮ್ಮ ತಂದೆ ನೋಡಿ ಮಾತಾಡುವುದು ಕಲಿಯಲಿ. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂ ಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ.? ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ? ಎಂದು ಆಕ್ರೋಶ ಹೊರಹಾಕಿದರು.
ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದಿರಿ? ನೆಹರು ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನೂ ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ಸಿಟಿ ರವಿಗೆ ವಿಶ್ವನಾಥ್ ಸವಾಲು ಹಾಕಿದರು.