ನೀರು ಸಂಸ್ಕರಣಾ ಘಟಕವನ್ನೇ ಹ್ಯಾಕ್ ಮಾಡಿದ ಭೂಪ..!

ಫ್ಲೋರಿಡಾ: ಅಮೇರಿಕದ ಹ್ಯಾಕರ್ ಒಬ್ಬ ನೀರು ಸಂಸ್ಕರಣಾ ಘಟಕದ ವ್ಯವಸ್ಥೆಯನ್ನೇ ಹ್ಯಾಕ್ ಮಾಡಿದ್ದಾನೆ. ಇಡೀ ನಗರಕ್ಕೆ ವಿಷಪೂರಿತ ನೀರು ಸರಬರಾಜು ಮಾಡುವ ಉದ್ದೇಶದಿಂದ ಹ್ಯಾಕರ್ ಹೀಗೆ ಮಾಡಿದ್ದಾನೆ. ಓಲ್ಡ್ ಸ್ಮಾರ್ ಎಂಬಲ್ಲಿ ಗುಣಮಟ್ಟದ ನೀರು ಪೂರೈಕೆಯ ಉದ್ದೇಶದಿಂದ ಕಾರ್ಯನಿರ್ವಹಣೆ ಮಾಡುತ್ತಿರುವ ನೀರು ಸಂಸ್ಕರಣ ಘಟಕದ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಂಡ ಹ್ಯಾಕರ್ ನೀರು ಶುದ್ಧೀಕರಣ, ಸಂಸ್ಕರಣೆಗೆ ಬಳಕೆ ಮಾಡುವ ಅಲ್ಲಿನ ಕೆಮಿಕಲ್ ಮಟ್ಟವನ್ನು ವಿಪರೀತವಾಗಿ ಏರಿಕೆ ಮಾಡಿದ್ದಾನೆ.
ನೀರು ಸಂಸ್ಕರಣಾ ಘಟಕಗಳಲ್ಲಿ ಸೋಡಿಯಮ್ ಹೈಡ್ರಾಕ್ಸೈಡ್ ನ್ನು ಬಳಕೆ ಮಾಡಲಾಗುತ್ತದೆ. ಈ ಸೋಡಿಯಂ ಹೈಡ್ರಾಕ್ಸೈಡ್ ಪ್ರಮಾಣ ಸಾಮಾನ್ಯವಾಗಿ ಪ್ರತಿ ಮಿಲಿಯನ್ ಗೆ 100 ಅಂಶಗಳಿರುತ್ತದೆ ಆದರೆ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ ಹ್ಯಾಕರ್ ಪ್ರತಿ ಮಿಲಿಯನ್ ಗೆ 11,100 ಪಾರ್ಟ್ ಗಳಿಗೆ ಏರಿಕೆ ಮಾಡಿದ್ದಾನೆ. ನೀರು ಸಂಸ್ಕರಣೆ ಕಾರ್ಯಾಚರಣೆಗಳಿಗೆ ಬಳಕೆ ಮಾಡುತ್ತಿದ್ದ ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಹ್ಯಾಕರ್ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.