ನಾಳೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಪುನೀತ್ ಅಭಿನಯದ ಜೇಮ್ಸ್ ಚಿತ್ರದ ರಿಲೀಸ್ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಯಲ್ಲಿ ಅವರ ಅಭಿಮಾನಿಗಳು ಅಪ್ಪು ಉತ್ಸವ ಆಚರಿಸಿದ್ರು. ಹಂಪಿಯ ಆರಾಧ್ಯ ದೈವ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಅಪ್ಪು ಭಾವಚಿತ್ರ ಇಟ್ಟು ಮಕ್ಕಳಿಂದ ಕೇಕ್ ಕಟ್ ಮಾಡಿಸಿದ್ರು.
ನಂತರ ಅಪ್ಪು ಅವರ ಭಾವಚಿತ್ರವನ್ನು ಆಟೋ ಮೇಲೆ ಇಟ್ಟು ಸಾಸಿವೆ ಕಾಳು ಗಣೇಶನ ದೇವಸ್ಥಾನದವರೆಗೂ ಮೆರವಣಿಗೆ ಮಾಡಲಾಯ್ತು. ಇನ್ನು ಈ ಮೆರವಣಿಗೆಯಲ್ಲಿ ನಂದಿಕೋಲು ಕುಣಿತ, ಜಾಂಜ್ ಮೇಳ, ಡೊಳ್ಳುಕುಣಿತ, ಲಂಬಾಣಿ ನೃತ್ಯ, ವೇಷಗಾರರ ಕಲೆ, ತಮಟೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಕಲೆಗಳ ಪ್ರದರ್ಶನ ಮಾಡಲಾಯ್ತು. ವಾದ್ಯಗಳನ್ನು ಮಾರಾಟ ಮಾಡುವವರೂ ಸಹ ಆಫ್ರಿಕನ್ ಜಂಬೆ, ಕೊಳಲು ಬಾರಿಸುವ ಮೂಲಕ ಅಪ್ಪುಗೆ ಸಂಗೀತ ನಮನ ಸಲ್ಲಿಸಿದ್ರು.