ಅದು ಬೇಡ ಎಂದವಳನ್ನು ಕೊಲೆಗೈದ ಭಗ್ನ ಪ್ರೇಮಿ, ಕೊನೆಗೆ ತಾನು ಸಾವಿಗೆ ಶರಣಾದ:

ಹಾಸನ: ಈ ಪ್ರಪಂಚವೆ ಹಾಗೇ ನಾವು ಅಂದುಕೊಳ್ಳುವುದು ಒಂದು, ದೈವ ಬಗೆವುದು ಮತ್ತೊಂದು, ಇಲ್ಲಿ ಯಾರಿಗೂ ಯಾವುದರಲ್ಲಿ ತೃಪ್ತಿ ಸಿಗುವುದಿಲ್ಲ. ಇದ್ದಿದ್ದರಲ್ಲಿ ತೃಪ್ತಿಯಿಂದ ಜೀವನ ನಡೆಸಿದರೆ ಜೀವನದ ರಸದೌತಣ ಅನುಭವಿಸಬಹುದಿತ್ತು. ಆದರೆ, ಇಷ್ಟವಿಲ್ಲದ್ದನ್ನು ಕೇಳಿ ಕೋಪದ ಕೈಗೆ ಬಿದ್ದು ಕೊಟ್ಟು ಈಗ ಅವಳನ್ನು ಹತ್ಯೆಗೈದು ಕೊನೆಗೆ ತಾನು ಸಾವಿಗೆ ಶರಣಾದವನ ಕಥೆಯಿದು.

ಹೌದು, ಪ್ರೀತಿ ನಿರಾಕರಿಸಿದ ಯುವತಿಯನ್ನು ಹಾಡುಹಗಲೇ ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾಲೆಬೇಲೂರು ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದವಳನ್ನು ಸುಷ್ಮಿತಾ (21)  ಎಂದು ಗುರುತಿಸಲಾಗಿದೆ. ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಭಗ್ನ ಪ್ರೇಮಿ ಹೇಮಂತ್ (25) ಎಂದು ತಿಳಿದು ಬಂದಿದೆ. 

ಹೇಮಂತ್ ಹಾಗೂ ಸುಶ್ಮಿತಾ ಒಂದೆ ಗ್ರಾಮದವರು. ಹಾಸನದ ಬೇಕರಿಯೊಂದರಲ್ಲಿ ಹೇಮಂತ ಕೆಲಸ ಮಾಡುತ್ತಿದ್ದ. ಕೆಲಸ ಮಾಡಿಕೊಂಡ ತನ್ನ ಪಾಡಿಗೆ ತಾನು ಜೀವನ ಮಾಡಿಕೊಂಡಿದ್ದರೆ ಇಂದು ಇಬ್ಬರು ಬದುಕಿ ಬಾಳಬಹುದಿತ್ತು. ಆದರೆ, ಒಂದೆ ಊರಿನವರು ಎಂಬ ಕಾರಣಕ್ಕೆ ಸ್ನೇಹ, ಪ್ರೀತಿ, ಮತ್ತೊಂದು ಅಂದುಕೊಂಡು ಕಳೆದ ನಾಲ್ಕು ವರ್ಷಗಳಿಂದ ಕಾಲ ತಳ್ಳಿಕೊಂಡು ಬಂದಿದ್ದರು. ಈ ಇಬ್ಬರ ಕಣ್ಣಾಮುಚ್ಚಾಲೆ ಆಟ ಪೋಷಕರ ಕಿವಿಗೆ ಬಡಿದಾಗ ಇಬ್ಬರನ್ನು ಇಬ್ಬರನ್ನು ಕರೆದುಕೊಂಡು ಹೋಗಿ ದೇವರ ಮೇಲೆ ಆಣೆ ಮಾಡಿಸಿದ್ದರು. ಅಂದಿನಿಂದ ಸುಶ್ಮಿತಾ ಹೇಮಂತನನ್ನು ದೂರ ಮಾಡತೋಡಗಿದ್ದಳು.

ಆದರೆ, ಆದಾಗಲೇ ತಾನು ಪ್ರೀತಿಸಿದ ಹುಡುಗಿಯನ್ನು ಮರೆಯಲಾಗದ ಸ್ಥಿತಿ ತಲುಪಿದ್ದ ಹೇಮಂತ್ ಕಣ್ಣು ಮುಂದೆ ಆಕೆಯೊಂದಿಗೆ ಕಳೆದ ದಿನಗಳು ಬರತೊಡಗಿದವು. ಇದರಿಂದ ಹೊರಬರದಂತ ಸ್ಥಿತಿ ತಲುಪಿದ್ದ ಹೇಮಂತ್, ಓಡಿ ಹೋಗಿ ಮದುವೆಯಾಗೋಣ ಎಂದು ಸುಷ್ಮಿತಾಳ ದುಂಬಾಲು ಬಿದ್ದಿದ್ದ. ಇದ್ಯಾವುದಕ್ಕೆ ಆಕೆ ಮಾತ್ರ ಸುತಾರಾಮ ಒಪ್ಪಿರಲಿಲ್ಲ.

ಇದರಿಂದ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋದ ಹೇಮಂತ್ ತನಗೆ ಸಿಗದಿರುವ ಪ್ರೀತಿ ಇನ್ಯಾರಿಗೂ ಸಿಗಬಾರದು ಎಂಬ ಹಠಕ್ಕೆ ಬಿದ್ದ. ಹೊಂಚು ಹಾಕಿ ಅವಳ ಆಚೆ ಬರುವುದನ್ನು ಕಾಯುತ್ತ ಕುಳಿತಿದ್ದ, ಅದೇ ರೀತಿ ಕಾಯುತ್ತಿದ್ದ ವೇಳೆ ಗುರುವಾರ ಐಡಿ ಕಾರ್ಡ್ ಜೆರಾಕ್ಸ್ ತರಲು ಮನೆಯಿಂದ ಹೊರಬಂದ ಸುಷ್ಮಿತಾಳ ಮೇಲೆ ಏಕಾಏಕಿ ಮೃಗನಂತೆ ದಾಳಿ ಮಾಡಿದ್ದಾನೆ. ಹಾಡುಹಗಲೇ ನಡುರಸ್ತೆಯಲ್ಲಿ ಮನಸ್ಸೋಯಿಚ್ಚೆ ಮಚ್ಚಿನಿಂದ ಕೊಚ್ಚಿದ್ದಾನೆ. ನಾಲ್ಕು ವರ್ಷಗಳ ಪ್ರೀತಿಯನ್ನು ಒಂದೇ ಕ್ಷಣದಲ್ಲಿ ಮರೆತು ರಾಕ್ಷಸನಂತೆ ಮೈಮೇಲೆ ಎರಗಿ ಹತ್ಯೆಗೈದಿದ್ದಾನೆ. ಆತನ ಕ್ರೂರ ತನ ಎಷ್ಟರ ಮಟ್ಟಿಗೆ ಇತ್ತೇದ್ದಂದರೆ ತನ್ನ ಮೇಲೆ ಏನಾಗುತ್ತಿದ್ದೇ ಎಂಬ ಯೋಚನೆ ಬರುವಷ್ಟರಲ್ಲಿ ಸುಷ್ಮಿತಾ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿ ಹೋಗಿತ್ತು. ಅಷ್ಟರ ಮಟ್ಟಿಗೆ ಕ್ರೂರತನ ಮೇರೆದಿದ್ದ ಹೇಮಂತ್.

ಅವಳನ್ನು ಹತ್ಯೆಗೈದು ನಂತರ ಗ್ರಾಮದ ಪಕ್ಕದಲ್ಲಿದ್ದ ಕೆರೆಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ. ಕೆರೆಯ ಪಕ್ಕದ ಜಮೀನನಲ್ಲಿ ಕೆಲಸ ಮಾಡುತ್ತಿದ್ದ ಮೃತ ಸುಷ್ಮಿತಾಳ ಚಿಕ್ಕಪ್ಪನ ಮಗ ಹಾಗೂ ಆತನ ಸ್ನೇಹಿತರು ಕೆರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದ ಹೇಮಂತನನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ಹೇಮಂತ್ ತನ್ನ ತಪ್ಪಿನಿಂದ ಒಂದು ಜೀವ ಕಳೆದು ಹೋಗಿದೆ ಎಂಬ ಅರಿಯಾಗಿರಬೇಕು. ಅಲ್ಲಿಂದ ನೇರವಾಗಿ ಕಾಫಿ ತೋಟವೋಂದಕ್ಕೆ ಅಲ್ಲಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಟ್ಟಿನಲ್ಲಿ ಪರಸ್ಪರ ಪ್ರೀತಿಸಿದವರ ಪ್ರೇಮಿಗಳ ಒಪ್ಪದ ತಪ್ಪಿಗೆ ಎರಡು ಕುಟುಂಬದವರು ಇಂದು ಬದುಕಿ ಬಾಳಬೇಕಾದ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದು ಪ್ರೀಯಕರನಿಂದ ದೂರವಾದ ತಪ್ಪಿಗೆ ಸುಷ್ಮಿತಾ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಡುವಂತಾಯಿತು. ಪ್ರೀತಿ ಮಧುರ, ತ್ಯಾಗ ಅಮರ ಎಂಬ ಮಾತನ್ನು ಅರಿತುಕೊಂಡು ತನ್ನ ಪಾಡಿಗೆ ತಾನು ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ ಹೇಮಂತ ಬದುಕಿ ಬಾಳಬಹುದಿತ್ತು. ಕೋಪದ ಕೈಗೆ ಬುದ್ದಿ ಕೊಟ್ಟು ಅದನ್ನು ಬೇಡ ಎಂದವಳನ್ನು ಕೊಲೆಗೈದ ಹೇಮಂತ್ ಕೊನೆಗೆ ತಾನು ಸಾವಿಗೆ ಶರಣಾದ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!