ಗೋವಿನಜೋಳದ ರಾಶಿಗೆ ಬೆಂಕಿ: 1.5 ಲಕ್ಷ ಮೌಲ್ಯದ ಬೆಳೆ ನಾಶ
ಹಾವೇರಿ: ಗೋವಿನಜೋಳದ ರಾಶಿಗೆ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ರಾಶಿ ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸವಣೂರು ತಾಲ್ಲೂಕಿನ ಕಳಸೂರ ಗ್ರಾಮದ ಮಾರುತಿ ಕಾಳಪ್ಪನವರ ಅವರಿಗೆ ಸೇರಿದ ಗೋವಿನಜೋಳ ರಾಶಿಗೆ ಗುರುವಾರ ರಾತ್ರಿ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಹೊಲದಲ್ಲಿ ಇದ್ದ ರಾಶಿಗೆ ಬೆಂಕಿ ಹಚ್ಚಿ ಖದೀಮರು ಪರಾರಿಯಾಗಿದ್ದಾರೆ. ಒಟ್ಟು 5 ಎಕರೆ ಹೊಲದಲ್ಲಿ ಬೆಳೆದ ಸುಮಾರು 100 ಕ್ವೀಟಲ್ ಅಂದಾಜು ಮೊತ್ತ 1.50.000ರೂಪಾಯಿ ಮೌಲ್ಯದ ಗೋವಿನ ಜೋಳ ಸುಟ್ಟು ಕರಕಲು ಆಗಿದೆ. ಅಲ್ಲದೇ, ತೆನೆಯ ರಾಸಿಗೆ ಹೊಚ್ಚಿದ ತಾಡಪತ್ರೆಯನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ.