ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ: ಶಾಸಕ ನೆಹರು ಓಲೇಕಾರ ಚಾಲನೆ:
ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಿಧಾನ ಸಭಾ ಸದಸ್ಯ ಹಾಗೂ ರಾಜ್ಯ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಬುಡಕಟ್ಟು ಅಯೋಗದ ಅಧ್ಯಕ್ಷ ನೆಹರು ಚ ಓಲೇಕಾರ ಅವರು ಚಾಲನೆ ನೀಡಿದರು.
ಭಾನುವಾರ ಹಾವೇರಿ ರೋಟರಿ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆ ಕಾರ್ಯ ಕ್ರಮದಲ್ಲಿ ಮಗುವೊಂದಕ್ಕೆ ಪೋಲಿಯೋ ಹನಿ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನವಜಾತ ಶಿಶುವಿನಿಂದ ಐದು ವರ್ಷದವರೆಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸುವುದು ಕಡ್ಡಾಯ. ಈ ಹಿಂದೆ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪುನ: ಲಸಿಕೆ ಹಾಕಿಸ ಬೇಕು. ಮಕ್ಕಳ ಆರೋಗ್ಯ. ವಿಕಲತೆಯನ್ನು ದೂರ ಮಾಡಲು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಹಾಕಿಸಿ ಎಂದು ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ
ಪೋಲಿಯೋ ಲಸಿಕೆ ಹಾಕುವದರಿಂದ ಮಕ್ಕಳಿಗೆ ಯಾವುದೇ ಅಡ್ಡಪರಿಣಾಮ ಉಂಟಾದುವುದಿಲ್ಲ. ಪೋಲಿಯೋ ಹನಿ ಮಕ್ರಳ ಆರೋಗ್ಯಕ್ಕೆಅತ್ಯಂತ ಸುರಕ್ಷಿತವಾಗಿದೆ. ಭಾರತ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮದ ಪ್ರತಿಫಲವಾಗಿ ವಿಶ್ವದಲ್ಲೇ ಭಾರತ ದೇಶ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಂದಿನಿಂದ ಪೋಲಿಯೋ ಕಾರ್ಯಕ್ರಮ ಆರಂಭಿಸಲಾಗಿದೆ. ಜಿಲ್ಲೆಯ ಐದು ವರ್ಷದವರೆಗಿನ 1.67.117 ಮಕ್ಕಳಿಗೆ ಲಸಿಕೆ ಹಾಕಲಾಗವುದು.ನೂರರಷ್ಟು ಮಕ್ಕಳಿಗೆ ಲಸಿಕೆ ತಲುಪಬೇಕು. ಈ ಉದ್ದೇಶದಿಂದ ಜಿಲ್ಲಾಡಳಿತ ಉತ್ತಮ ಯೋಜನೆ ರೂಪಿಸಿದೆ. ಜಿಲ್ಲೆಯ ಎಲ್ಲ ಗ್ರಾಮ ಪಟ್ಟಣ ವ್ಯಾಪ್ತಿಯಲ್ಲಿ 1013 ಪೋಲಿಯೋ ಬೂತ್ ತೆರೆಯಲಾಗಿದೆ. ಲಸಿಕೆ ನೀಡಲು 2026 ಆರೋಗ್ಯ ಕಾರ್ಯಕರ್ತರ ನಿಯೋಜಿತ ಲಾಗಿದೆ. ಉಸ್ತುವಾರಿಗಾಗಿ 176 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಲಸಿಕೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಅಳವಡಿಸಿಕೊಳ್ಳಲಾಗಿದೆ. ಮೊದಲ ದಿನ ಬೂತ್ ನಲ್ಲಿ ನಂತರದ ಮೂರು ದಿವಸ ಮನೆ ಮನೆಗೆ ತೆರಳಿ ಮಕ್ಕಳಿಗ್ ಲಸಿಕೆ ಹಾಕಲಾಗವದು ಎಂದರು
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು ಹಾಗೂ ಪ್ರಭಾರ ಡಿಎಚ್ಒ ಡಾ.ಜಯಾನಂದ. ಟಿಎಚ್ಒ ಪ್ರಭಾಕರ್ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.