ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ರಾಜ್ಯಸಭೆ ಚುನಾವಣೆ ವೇಳೆ ಮತದಾನ ಮಾಡುವಾಗ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಗೆ ತೋರಿಸಿದ್ದರು ಅವರ ಮತವನ್ನು ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ದೂರು ನೀಡಿದ್ದರು.
ಆದರೆ ತಮ್ಮಿಂದ ತಪ್ಪು ಆಗಿಲ್ಲ ರೇವಣ್ಣ ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದರು. ನಂತರ ಚುನಾವಣಾಧಿಕಾರಿಗಳು ಸ್ಥಳದಲ್ಲಿನ ಕ್ಯಾಮರಾ, ವಿಡಿಯೊ ರೆಕಾರ್ಡ್ ಗಳನ್ನು ಪರಿಶೀಲಿಸಿದರು. ಅದರಲ್ಲಿ ಮತ ಚಲಾವಣೆ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ. ಈ ಮೂಲಕ ರೇವಣ್ಣಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇದನ್ನೂ ಓದಿ : – ಡಿಕೆಶಿಗೆ ಮತ ತೋರಿಸಿದ ರೇವಣ್ಣ – ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ