ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ನಾಲ್ವರು ತಂಡದ ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ತಂಡದ ಜೊತೆಗಿರುವ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಶ್ರೀಧರ್ ಗೆ ಶನಿವಾರ ನಡೆಸಿದ ಪರೀಕ್ಷೆ ವೇಳೆ ಪಾಸಿಟಿವ್ ದೃಢಪಟ್ಟಿದೆ.
ತಂಡದ ಫಿಜಿಯೊಥೆರಪಿಸ್ಟ್ ನಿತಿನ್ ಪಟೇಲ್ ಗೆ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಭಾರತ ತಂಡ ಇದೀಗ ಕೊರೊನಾ ಭೀತಿಗೆ ಒಳಗಾಗಿದೆ.
ಪ್ರಸ್ತುತ ಭಾರತ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ ನಲ್ಲಿ 3ವಿಕೆಟ್ ಗೆ 270 ರನ್ ಗಳಿಸಿದ್ದು, ಒಟ್ಟಾರೆ 171 ರನ್ ಗಳ ಮಹತ್ವದ ಮುನ್ನಡೆ ಪಡೆದಿದೆ.