ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದಕ್ಕೆ ಸ್ವತಃ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಆಡಿದ 8 ಪಂದ್ಯಗಳಲ್ಲಿ ಟಾಸ್ ಸೋತಿದ್ದ ವಿರಾಟ್ ಕೊಹ್ಲಿ 9ನೇ ಪಂದ್ಯದಲ್ಲಿ ಗೆದ್ದು ದಾಖಲೆ ಮುರಿದಿದ್ದಾರೆ. ಅಲ್ಲದೇ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಚೆನ್ನೈ ಟೆಸ್ಟ್ ನಂತರ ಮೊದಲ ಬಾರಿ ಟಾಸ್ ಗೆಲುವು ಇದಾಗಿದೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಮೇಲಕ್ಕೆ ಎಸೆದಿದ್ದು ಅಲ್ಲದೇ ಟಾಸ್ ಕರೆ ನೀಡಿದ್ದು ಅವರೇ. ಆದರೆ ಅಚ್ಚರಿ ಎಂಬಂತೆ ಕೊಹ್ಲಿ ಪರ ಟಾಸ್ ಬಂದಿತು.