ಶಾಲೆ ಆರಂಭ ವಿಚಾರವಾಗಿ ಇಲಾಖೆಯ ಅಧಿಕಾರಿಗಳ ಜೊತೆ ಇನ್ನೂ ಮಾತನಾಡಿಲ್ಲ. ನಮಗೆ ಮಕ್ಕಳ ಜೀವ ಮುಖ್ಯ ಎಂದು ಶಾಲಾರಂಭಕ್ಕೆ ಪರೋಕ್ಷವಾಗಿ ಸುಧಾಕರ್ ವಿರೋಧ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 24,37,732 ಜನ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಇಂದಿನಿಂದ ಲಸಿಕೆ ನೀಡುತ್ತೀದ್ದೇವೆ. ಹತ್ತು ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಲಸಿಕೆ ಪ್ರಮಾಣ ಕಡಿಮೆ. ಇದೆ ಇನ್ನೆರಡು ದಿನಗಳಲ್ಲಿ ದೆಹಲಿಗರ ಭೇಟಿ ನೀಡುತ್ತೀದ್ದೇನೆ. ಶಾಲೆ ಆರಂಭಕ್ಕೆ ಬಹಳ ಎಚ್ಚರಿಕೆ ವಹಿಸಿಬೇಕು. ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಿ ಎಂದು ಏಮ್ಸ್ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಶಾಲೆ ತೆರೆಯಲು ಅವಸರ ಬೇಡ ಎಂದು ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಅನ್ ಲಾಕ್ ಮಾಡಿರುವ ಅವಧಿ ಜುಲೈ 5ರವರೆಗೂ ಇದೆ. ಇನ್ನೂ ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚು ಸೋಂಕಿದೆ ಇದೆಲ್ಲವನ್ನೂ ಗಮನಿಸಿದ್ದೇನೆ. ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ಸುಧಾಕರ್ ನುಡಿದರು.