ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಕಾರ್ಯಕರ್ತರ ಪಡೆ ಇದೆ. ಮುಖ್ಯಮಂತ್ರಿ ಆಗುವ ಬಗ್ಗೆ ಅವರ ಅವರ ಅಭಿಮಾನಿಯಿಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಅಂತಿಮವಾಗಿ ಚುನಾವಣೆ ಬಳಿಕ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವ ವಿಚಾರ ದಲ್ಲಿ ಹೇಳಿಕೆ ಯಿಂದಾಗಿ ಪಕ್ಷಕ್ಕೆ ಯಾವುದೇ ಡ್ಯಾಮಜ್ ಆಗಲ್ಲ.ಏಕೆಂದರೆ ಚುನಾವಣೆಯಲ್ಲಿ 113 ಸೀಟು ಬಂದ ಮೇಲೆ ಆಗ ಹೈಕಮಾಂಡ ವಿಚಾರ ಮಾಡುತ್ತದೆ.ಅದಕ್ಕೂ ಮುಂಚೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಆಕಾಂಕ್ಷಿಗಳಾಗಿದ್ದಾರೆ. ಯಾವಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷೆಗಳು ಇರುತ್ತಾರೆ. ಇದು ಎಲ್ಲ ಪಕ್ಷದಲ್ಲಿ ಸಾಮಾನ್ಯ ವಾಗಿ ಇರುತ್ತದೆ. ನಾನು ಈಗ ಏನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ. ಈಗ ಇರುವವರ ಬಗ್ಗೆ ಮುಗಿಯಲಿ ಮುಂದೆ ನೋಡೊಣ. ಇನ್ನು ವಯಸ್ಸು ಇದೆ. ಮುಂದೆ ಮುಖ್ಯಮಂತ್ರಿ ಬಗ್ಗೆ ನೋಡೋಣ ಎಂದು ಹೇಳಿದರು.
ಜಮೀರ್ ಅಹಮ್ಮದ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ನಮ್ಮ ಪಕ್ಷದಲ್ಲಿ ಸಿಕ್ಸರ್ ಬಾರಿಸುತ್ತಾ ಇರುತ್ತಾರೆ. ಕ್ರಿಕೆಟ್ ದಲ್ಲಿ ಸಿಕ್ಸರ್ ಬಾರಿಸಿದ ಬಳಿಕ ಗೆಲವು ಆಗುವಂತೆ ಹಾಗೆ ಅವರು ಸಿಕ್ಸರ್ ಬಾರಿಸುತ್ತಾ ಇರುತ್ತಾರೆ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿ,ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಾನು ಸ್ಪರ್ಧೆ ಮಾಡಬೇಕು. ಇಲ್ಲವೇ ನಮ್ಮ ಮಕ್ಕಳು ಸ್ಪರ್ಧೆ ಮಾಡಬೇಕು. ಈಗ ಹಾಗೆ ಆಗಿದೆ. ಏಕೆಂದರೆ ಇನ್ನು ಯಾರೂ ಸ್ಪರ್ಧೆ ಮಾಡಲು ಮುಂದೆ ಬರಲ್ಲ. ಅದಕ್ಕೆ ನಮ್ಮ ಮಕ್ಕಳನ್ನು ರಾಜಕೀಯ ತರವುದು ಅನಿವಾರ್ಯವಾಗುತ್ತದೆ ಎಂದರು.
ರಮೇಶ್ ಜಾರಕಿಹೊಳಿ ಅವರ ರಾಜಿನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅದು ಅವರಿಗೆ ಸಂಭಂಧಪಟ್ಟ ವಿಷಯ ಅವರೇ ಪ್ರತಿಕ್ರಿಯೆ ನೀಡಬೇಕು. ನಾನು ಹೇಗೆ ಹೇಳಬೇಕು ಎಂದು ಅವರು ಪ್ರಶ್ನಿಸಿದರು.