ಹಿಜಾಬ್ ಬ್ಯಾನ್ ಆದೇಶ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆಯ ಬಳಿಕ ಮೇಲ್ಮನವಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಕರಕರ್ನಾಟಕ ಕರ್ನಾಟ ಹೈಕೋರ್ಟ್ ಹಿಜಾಬ್ ಬಗ್ಗೆ ನಿನ್ನೆ ತೀರ್ಪು ನೀಡಲಾಗಿತ್ತು. ಬಳಿಕ, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿ ಹಿನ್ನೆಲೆ, ತುರ್ತಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಲಾಗಿತ್ತು. ಸೋಮವಾರವೇ ವಿಚಾರಣೆಗೆ ವಕೀಲ ಸಂಜಯ್ ಹೆಗಡೆ ಮನವಿ ಮಾಡಿದ್ದರು. ಆದರೆ ಸಿಜೆಐ ಎನ್.ವಿ. ರಮಣ, ವಕೀಲ ಸಂಜಯ್ ಹೆಗಡೆ ಮನವಿ ತಿರಸ್ಕರಿಸಿದ್ದಾರೆ. ಹೋಳಿ ಹಬ್ಬದ ರಜೆ ಬಳಿಕ ಅರ್ಜಿ ವಿಚಾರಣೆ ಎಂದು ಸಿಜೆಐ ಎನ್.ವಿ. ರಮಣ ತಿಳಿಸಿದ್ದಾರೆ.
ಹಿಜಾಬ್ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆಯಾ? ನಾಳೆಯಿಂದ ಸುಪ್ರೀಂಕೋರ್ಟ್ಗೆ ರಜೆಯಿದೆ ಎಂದು ಹೇಳಿದ್ದಾರೆ. ಮುಂದಿನ ವಾರ ವಿಚಾರಣೆಗೆ ಅಶ್ವಿನಿ ಉಪಾಧ್ಯಾಯ ಮನವಿ ಮಾಡಿದ್ದಾರೆ. ಏಕರೂಪ ಸಮವಸ್ತ್ರ ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ. ವಕೀಲ ಅಶ್ವಿನಿ ಉಪಾಧ್ಯಾಯರಿಂದ ಸಿಜೆಐ ಪೀಠದಲ್ಲಿ ಪ್ರಸ್ತಾಪಿಸಲಾಗಿದೆ. ಈ ಅರ್ಜಿಯ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವೇನಿದೆ? ನಾಳೆಯಿಂದ ರಜೆ ಆರಂಭವಾಗುತ್ತದೆ ಎಂದು ಸಿಜೆ ಎನ್.ವಿ. ರಮಣ ತಿಳಿಸಿದ್ದಾರೆ.
0 102 Less than a minute