ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ, ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಕೂರುವ ಹಾಗಿಲ್ಲ ಎಂದು ಹೈಕೋರ್ಟ್ ಅಂತಿಮ ತೀರ್ಪು ನೀಡಿದರೂ ಮುಸ್ಲಿಂ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಬೇಕು, ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದೆ ಹೋದರೆ ಕಾಲೇಜಿಗೇ ಹೋಗುವುದಿಲ್ಲ ಎಂದು ಹಠ ಮುಂದುವರಿಸಿದ್ದಾರೆ.
ಉಡುಪಿಯಲ್ಲಿ ಆರಂಭದಲ್ಲಿ ಹಿಜಾಬ್ ಧರಿಸಿ ಬಂದು ವಿವಾದ ಎದ್ದು ಹೈಕೋರ್ಟ್ ಮೊರೆ ಹೋದ ಆರು ಮಂದಿ ವಿದ್ಯಾರ್ಥಿನಿಯರು, ಶಿವಮೊಗ್ಗದಲ್ಲಿ ಕಮಲಾ ನೆಹರೂ ಕಾಲೇಜಿನಲ್ಲಿ 15 ವಿದ್ಯಾರ್ಥಿನಿಯರು ಇಂದು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಹೋಗಿದ್ದರು. ತರಗತಿಯೊಳಗೆ ಹಿಜಾಬ್ ಧರಿಸಲು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ತರಗತಿಯೊಳಗೆ ಬಿಡದ ಕಾರಣ ವಿದ್ಯಾರ್ಥಿನಿಯರು ವಾಪಸ್ ತೆರಳಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು, ಹೈಕೋರ್ಟ್ ಆದೇಶ ತಪ್ಪಾಗಿದೆ, ನಮ್ಮ ಹಕ್ಕುಗಳನ್ನು ಕಸಿಯಲಾಗಿದೆ, ಹಿಜಾಬ್ ಧರಿಸದೆ ನಾವು ಕಾಲೇಜಿನೊಳಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಆಡಳಿತ ಮಂಡಳಿಯೊಂದಿಗೆ ಮಾತುಕತೆಯಾಗಿ ವಿಫಲವಾಗಿ ಮನೆಗೆ ವಾಸ್ಸಾಗಿದ್ದಾರೆ.