ಆಫ್ಘಾನಿಸ್ತಾನದಲ್ಲಿ ಇತ್ತೀಚಿನ ಬೆಳವಣಿಗೆ ಜಗತ್ತಿಗೆ ಆತಂಕಕ್ಕಾರಿಯಾಗಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷ ದಾಳಿ ಎದುರಿಸಲು ಸಜ್ಜಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಅಬ್ಬರದ ನಂತರ ವಿಶ್ವಸಂಸ್ಥೆಯಲ್ಲಿ ಶನಿವಾರ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳು ಅಲ್ಲದೇ ಅಲ್ಪ ಸಂಖ್ಯಾತ ಸಮುದಾಯದ ರಕ್ಷಣೆ ಅತ್ಯಗತ್ಯವಾಗಿದೆ. ಕೆಲವು ರಾಷ್ಟ್ರಗಳು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಉಗ್ರವಾದವನ್ನು ಪೋಷಿಸುತ್ತಿವೆ ಎಂದರು.
ಜಗತ್ತು ಸುರಕ್ಷಿತವಾಗಿರಬೇಕಾದರೆ ಉಗ್ರರನ್ನು ಸಂಘಟಿತವಾಗಿ ಮಟ್ಟ ಹಾಕಬೇಕಾಗಿದೆ. ಇದಕ್ಕಾಗಿ ಎಲ್ಲಾ ದೇಶಗಳು ಒಂದಾಗಬೇಕಾಗಿದೆ ಎಂದು ಅವರು ಹೇಳಿದರು.