ಬೆಂಗಳೂರು : ನೀವು ಫುಟ್‌ಪಾತ್ ಮೇಲೆ ಗಾಡಿ ನಿಲ್ಲಿಸ್ತಿದ್ದೀರಾ ? ಹಾಗಾದ್ರೆ ದಂಡ ಕಟ್ಟಲು ರೆಡಿಯಾಗಿದೆ. ಏಕೆಂದ್ರೆ ಪಾದಚಾರಿ ಮಾರ್ಗ ಮೇಲೆ ವಾಹನ ನಿಲ್ಲಿಸುವವರ ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡುವಂತೆ ಗೃಹ ಇಲಾಖೆ ಸುತ್ತೋಲೆ ಹೊರಡಿಸಿದೆ.
ಫುಟ್‌ಪಾತ್ ಮೇಲೆ ಗಾಡಿ ನಿಲ್ಲಿಸಿದ್ರೆ 500 ರಿಂದ 1000 ರೂಪಾಯಿ ದಂಡ, ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸುವವರಿಗೆ ಪ್ರತಿಗಂಟೆಗೆ 50 ರೂಪಾಯಿಯಂತೆ ದಂಡ ವಿಧಿಸಬೇಕೆಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.
ಪಾದಚಾರಿ ಮಾರ್ಗಗಳ ಅತಿಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ನೀಡಿರುವ ಆದೇಶದ ಅನ್ವಯ ಈ ಸುತ್ತೋಲೆ ಹೊರಡಿಸಲಾಗಿದೆ.