ಕೋವಿಡ್-19 ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿರುವುದನ್ನು ತಡೆಯಲು ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಡಾ ಸುಧಾಕರ್ ಹೇಳಿದರು.
ತಡರಾತ್ರಿ ಪಾರ್ಟಿಗಳನ್ನು ನಿಷೇಧಿಸಿದ್ದಾರೆ, ಇಂತಹ ಕಾರ್ಯಕ್ರಮಗಳ ಸಮಯದಲ್ಲಿ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಇದನ್ನು ಹೊರತುಪಡಿಸಿ, ಮದುವೆ ಸಮಾರಂಭಗಳು ಮತ್ತು ಇತರ ರೀತಿಯ ಸಮಾರಂಭಗಳಲ್ಲಿ ದೊಡ್ಡ ಕೂಟಗಳನ್ನು ನಿರ್ಬಂಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಡಾ.ಸುಧಾಕರ್ ಸ್ಪಷ್ಟಪಡಿಸಿದರು.