ಭಾರೀ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು, ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ 73 ವಾರ್ಡಗಳ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 39 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಪಕ್ಷೇತರರಾಗಿ ಕಣಕ್ಕಿಳಿದಿದ್ದ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಎಐಎಂಐಎಂ 2 ಹಾಗೂ ಜೆಡಿಎಸ್ 1 ಸ್ಥಾನಕ್ಕೆ ಕುಸಿತ ಕಂಡಿದೆ.
ಮೇಯರ್ ಸ್ಥಾನ ಒಲಿಸಿಕೊಳ್ಳಬೇಕಾದರೆ 45 ಸ್ಥಾನದ ಅವಶ್ಯಕತೆ ಇದ್ದು, ಪಕ್ಷೇತರರಾಗಿ ಗೆಲುವು ಕಂಡು 5 ಅಭ್ಯರ್ಥಿಗಳ ನಿಲುವಿನ ಮೇಲೆ ಮೇಯರ್ ಸ್ಥಾನ ಅವಲಂಬಿಸಿದೆ.