ಪತಿಯೇ ಪತ್ನಿಯನ್ನು ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠ ಎಂಬಲ್ಲಿ ನಡೆದಿದೆ.
ಸುನೀತಾ ಕೊಲೆಯಾದವರು. ಪತಿ ಮೂಡಬಿದ್ರೆಯ ದಿನ್ ರಾಜ್ ಕೊಲೆ ಆರೋಪಿ.
ನಿನ್ನೆ ಸಂಜೆ ಪತಿ- ಪತ್ನಿ ಮಧ್ಯೆ ಜಗಳ ನಡೆದಿತ್ತು. ಇದೇ ವೇಳೆ ದಿನ್ ರಾಜ್ ಆಯುಧದಿಂದ ಪತ್ನಿಯ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಸುನೀತಾ ಕುಸಿದು ಬಿದ್ದಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿತ್ತು.
ವಿಷಯ ಅರಿತ ಬಳಿಕ ಮನೆಮಂದಿ ಹಾಗೂ ಸ್ಥಳೀಯರು ತಕ್ಷಣ ಸುನೀತಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮೂಡಬಿದ್ರೆ ಪೊಲೀಸರು ಆರೋಪಿ ದಿನ್ ರಾಜ್ ನನ್ನು ಇಂದು ಬಂಧಿಸಿದ್ದಾರೆ.