ತುಂಬು ಗರ್ಭಿಣಿ ಪತ್ನಿಯನ್ನು ಕಣಿವೆಗೆ ತಳ್ಳಿದ ಪತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಇಸ್ತಾಂಬುಲ್: ವ್ಯಕ್ತಿಯೊಬ್ಬ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಕಣಿವೆಗೆ ತಳ್ಳಿದ್ದಾನೆ. ಹಿಗೆ ತಳ್ಳುವುದಕ್ಕೂ ಮೊದಲು ಆತ ಪತ್ನಿಯೊಂದಿಗೆ ರೊಮ್ಯಾಂಟಿಕ್ ಫೊಟೋವೊಂದನ್ನು ತೆಗೆದುಕೊಂಡಿದ್ದಾನೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇರಾನ್ ನಲ್ಲಿ ಈ ಘಟನೆ ನಡೆದಿದ್ದು, ಹಕನ್ ಕೊಲೆ ಮಾಡಿದ ಗಂಡ ಎನ್ನಲಾಗಿದೆ. ಈತನ ಪತ್ನಿ ಸೆಮ್ರಾ ಮೃತ ದುರ್ದೈವಿ. ಟರ್ಕಿಯ ಬಟರ್ಫ್ಲೈ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ.
ಈ ದಂಪತಿ ರಜೆ ಕಳೆಯಲು ಟರ್ಕಿಗೆ ತೆರಳಿದ್ದರು. ಈ ವೇಳೆ ಸೆಲ್ಫಿ ತೆಗೆದ ಪತಿ ನಂತರ ಪತ್ನಿಯನ್ನು ಕೆಳಗೆ ತಳ್ಳಿದ್ದ. ಘಟನೆ ಜೂನ್ 2018 ರಲ್ಲಿ ನಡೆದಿತ್ತು. ತನಿಖೆ ವೇಳೆ ಹಕನ್ ಐಸಲ್, ಪತ್ನಿ ವಿಮೆ ಹಣ ತೆಗೆದುಕೊಳ್ಳಲು ಕೊಲೆ ಮಾಡಿದ್ದ ಎನ್ನಲಾಗಿದೆ. ಪತ್ನಿ ಕೊಲೆ ಮಾಡಿದ ನಂತರ ವೈಯಕ್ತಿಕ ಅಪಘಾತ ವಿಮೆಯಾಗಿ 400,000 ಟರ್ಕಿ ಲಿರಾ ತೆಗೆದುಕೊಳ್ಳಲು ಮುಂದಾಗಿದ್ದ. ಇದಕ್ಕಾಗಿ ವಿಮೆ ಕಂಪನಿಗೆ ಹೋಗಿದ್ದ. ಆದರೆ ಇದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಆತನನ್ನು ಬಂಧಿಸಿದ್ದರು.
ಆಕೆಯನ್ನು ಕೊಲ್ಲುವ ಉದ್ದೇಶಕ್ಕಾಗಿ ಮೂರು ಗಂಟೆಗಳ ಕಾಲ ಬೆಟ್ಟದ ತುದಿಯಲ್ಲಿ ಕುಳಿತಿದ್ದಾರೆ. ನಂತರ ಯಾರು ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯ ಎಸಗಿದ್ದಾನೆ. ಇದೊಂದು ಪೂರ್ವಭಾವಿ ಕೃತ್ಯವಾಗಿದ್ದು, ಕೊಲೆ ಮಾಡಿದ ಪತಿಯನ್ನು ಬಂಧಿಸಬೇಕು ಎಂದು ಹೈ ಕ್ರಿಮಿನಲ್ ಕೋರ್ಟ್ ತೀರ್ಪು ನೀಡಿದೆ. ಈತ ತನ್ನ ಮೇಲಿನ ಆರೋಪ ತಳ್ಳಿ ಹಾಕಿದ್ದಾನೆ. ನಾನು ಹತ್ಯೆ ಮಾಡಿಲ್ಲ. ಸೆಲ್ಫಿ ತೆಗೆದ ನಂತರ ಪತ್ನಿ ತನ್ನ ಫೋನ್ ಕೇಳಿದ್ದಳು. ಅದು ಬ್ಯಾಗ್ ನಲ್ಲಿದ್ದ ಕಾರಣ ತರಲು ಹೋಗಿದ್ದೆ. ಅಷ್ಟರಲ್ಲಾಗಲೇ ಹಿಂದೆ ಕಿರುಚಿದ ಧ್ವನಿ ಕೇಳಿಸಿತು. ತಿರುಗಿ ನೋಡಿದರೆ ಹೆಂಡತಿ ಇರಲಿಲ್ಲ ಎಂದಿದ್ದಾನೆ.